UP Gang in Mangaluru?- ಯುಪಿ ಗ್ಯಾಂಗ್‌ ಇದೆ ಎಚ್ಚರಿಕೆ: ಸರಣಿ ಪ್ರಕರಣ- ಕಾರಿನ ಗಾಜು ಒಡೆದು ಕಳವು- ಆರೋಪಿಗಳಿಗೆ ಶೋಧ


ಕರಾವಳಿಯಲ್ಲಿ ಯು.ಪಿ. ಮೂಲದ ಗ್ಯಾಂಗೊಂದು ಸಕ್ರಿಯಾಗಿವೆ. ಮಂಗಳೂರಿನ ವಿವಿಧೆಡೆ ನಿಲ್ಲಿಸಿದ ಕಾರನ್ನು ಟಾರ್ಗೆಟ್ ಮಾಡುತ್ತಿರುವ ಈ ಗ್ಯಾಂಗ್, ಕಾರಿನ ಗಾಜು ಒಡೆದು ಅದರಲ್ಲಿನ ಬೆಲೆ ಬಾಳುವ ವಸ್ತುಗಳನ್ನು ದೋಚಿ ಕ್ಷಣ ಮಾತ್ರದಲ್ಲಿ ಪರಾರಿಯಾಗುತ್ತಿದೆ.

ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಾಸ್ಟೋರ್ ಮತ್ತು ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠದಲ್ಲಿ ಇಂತಹ ಘಟನೆಗಳು ನಡೆದಿವೆ.


ಮೊದಲ ಘಟನೆಯಲ್ಲಿ ಲ್ಯಾಪ್‌ಟಾಪ್‌ ಸೇರಿದಂತೆ ಐಪೋನ್‌‌ ಹಾಗೂ ಬ್ಯಾಂಕ್‌ಗಳ ಚೆಕ್‌ ಹಾಳೆಗಳನ್ನು ಕಳವು ಮಾಡಲಾಗಿದ್ದರೆ, ಎರಡನೇ ಪ್ರಕರಣದಲ್ಲಿ ಸುಮಾರು 40,000 ರೂ. ಹಣ ಹಾಗೂ ದಾಖಲೆಗಳನ್ನು ಒಳಗೊಂಡ ಬ್ಯಾಗನ್ನು ಕಳವುಮಾಡಲಾಗಿದೆ.











ಈ ಸರಣಿ ಕೃತ್ಯಗಳ ಹಿಂದೆ ಉತ್ತರ ಪ್ರದೇಶ ರಾಜ್ಯದ ಕುಖ್ಯಾತ ಓಜಿ ಕೊಪ್ಪಮ್ ಗ್ಯಾಂಗ್ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ತಂಡದ ಹಲವಾರು ಆರೋಪಿಗಳನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಬಂಧಿಸಲಾಗಿದೆ.


ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರಾ ಶೆಟ್ಟಿ ಎನ್ನುವವವರು ಆಗಸ್ಟ್‌ 6ರಂದು ತನ್ನ ಸ್ನೇಹಿತ ಶ್ರೀನಿವಾಸ್‌ ಭಟ್‌‌ ಎನ್ನುವವರ ಕಾರಿನಲ್ಲಿ ಕೊಲ್ಲೂರು, ಕಟೀಲು, ಮಂಗಳೂರಿನ ದೇವಸ್ಥಾನಕ್ಕೆ ಭೇಟಿ ನೀಡಿ ಸಂಜೆ ಉಡುಪಿಗೆ ವಾಪಾಸ್ಸಾಗಿದ್ದರು.


ನಗರದ ಸಿಟಿ ಸೆಂಟರ್‌ನ ಟ್ರೆಂಡ್ಸ್ ಫುಟ್‌ವೇರ್ ಅಂಗಡಿ ಬಳಿ ತನ್ನ ಕಾರನ್ನು ನಿಲ್ಲಿಸಿ ಹೋಟೆಲ್‌ನಿಂದ ಊಟ ಪಾರ್ಸೆಲ್‌‌ ತರಲು ಹೋಗಿದ್ದರು. ಹೋಟೆಲ್‌ನಿಂದ ವಾಪಾಸ್ಸು ಬಂದು ನೋಡಿದಾಗ ಕಾರಿನ ಹಿಂಬದಿಯ ಗ್ಲಾಸ್ ಒಡೆದು ಲ್ಯಾಪ್‌ಟಾಪ್‌ ಕಳವು ಮಾಡಲಾಗಿತ್ತು.


ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu