Yatnal on Ganeshotsava - ಕೋವಿಡ್ ಮಾರ್ಗಸೂಚಿಗೆ ಅಂಜದೇ ಗಣೇಶೋತ್ಸವ ನಡೆಸಲು ಶಾಸಕ ಯತ್ನಾಳ್ ಕರೆ!




ಗಣೇಶೋತ್ಸವ ಕಾರ್ಯಕ್ರಮಕ್ಕೆ ಕೋವಿಡ್ ಮಾರ್ಗಸೂಚಿ ಹೇರಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೂ ಸರ್ಕಾರದ ನಿಯಮಗಳಿಗೆ ಅಂಜದೇ ಗಣೇಶೋತ್ಸವ ಆಚರಿಸಿ ಎಂದು ಅವರು ಕರೆ ನೀಡಿದ್ದಾರೆ.


ತಜ್ಞರು ಯಾವ ಆಧಾರದ ಮೇಲೆ ವೈಜ್ಞಾನಿಕ ಮಾಹಿತಿ ಕೊಟ್ಟಿದ್ದಾರೆ ಗೊತ್ತಿಲ್ಲ. ನಮ್ಮ ಜನ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ. ಆದರೆ, ಗಣೇಶೋತ್ಸವಕ್ಕೆ ಮಾತ್ರವೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇಷ್ಟೇ ಜನ ಸೇರಬೇಕು, ಗಣಪತಿ ಕೂರಿಸುವಾಗ ಇಷ್ಟೇ ಜನ ಇರಬೇಕು ಎಂದೆಲ್ಲ ನಿಯಮಗಳನ್ನು ಹಾಕಿದ್ದಾರೆ ಎಂದು ಯತ್ನಾಳ್ ಟೀಕಿಸಿದರು.


ಎಸ್ ಪಿ ಹಾಗೂ ಡಿಸಿ ಅವರು ಕೇವಲ ಹಿಂದೂ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವು ಕೇಳುವುದಿಲ್ಲ. ಹೆಚ್ಚಂದ್ರೆ, ಗುಂಡು ಹೊಡೆಯಬಹುದು. ನಾನು ಸತ್ತರೂ ಹೆಸರು ತಗೊಂಡು ಸಾಯಬೇಕು ಅದಕ್ಕೆ ಸಿಎಂಗೆ ಕೂಡ ಗಣೇಶೋತ್ಸವಕ್ಕೆ ತೊಂದರೆ ಮಾಡಬಾರದು ಅಂತ ಕೇಳಿದ್ದೇನೆ. ನೀವು ಹತ್ತು ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತೀರಿ, ಗಣೇಶೋತ್ಸವಕ್ಕೆ ಮಾತ್ರ 50 ಷರತ್ತು ಹಾಕಿದ್ದಾರೆ. ಗಣೇಶೋತ್ಸವಕ್ಕೆ ಮಾತ್ರವೇ ಕೊರೊನಾ ನೆನಪಾಗುತ್ತಾ ಎಂದು ತಾನು ಸಿಎಂ ಅವರನ್ನು ಪ್ರಶ್ನಿಸಿದ್ದೇನೆ ಎಂದು ಯತ್ನಾಳ್ ಹೇಳಿದರು.


ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆ ಮಾಡುವ ಯಾರು ಕೂಡ ಅಂಜ ಕೂಡದು ಎಂದು ಕರೆ ನೀಡಿರುವ ಅವರು ಸರ್ಕಾರದ ಕೊರೊನಾ ಮಾರ್ಗದರ್ಶಿ ನಿಯಮಗಳಿಗೆ ಆಡಳಿತ ಪಕ್ಷದಲ್ಲಿದ್ದುಕೊಂಡೇ ವಿರೋಧ ವ್ಯಕ್ತಪಡಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu