Corona Update- ದ.ಕ.ದಲ್ಲಿ 400ರ ಗಡಿಯತ್ತ ಕೊರೋನಾ: ರಾಜ್ಯದಲ್ಲೂ ಸೋಂಕು ವಿಪರೀತ ಏರಿಕೆ





ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಮತ್ತೆ ಭಾರೀ ಏರಿಕೆ ಕಂಡಿದೆ.



ನಿನ್ನೆ 337 ಪ್ರಕರಣಗಳು ದಾಖಲಾಗಿದ್ದರೆ, ಇಂದು ಆ ಸಂಖ್ಯೆ 400 ಗಡಿಯತ್ತ ಬಂದಿದೆ. ರಾಜ್ಯದ ಶೇಕಡಾ 20ರಷ್ಟು ಪ್ರಕರಣಗಳು ದಕ್ಷಿಣ ಕನ್ನಡದಲ್ಲಿ ದಾಖಲಾಗಿರುವುದು ಆತಂಕ ಸೃಷ್ಟಿಸಿದೆ.



ಬುಧವಾರ ಮೂರು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದರೆ, ಬುಧವಾರ ಐದು ಜಿಲ್ಲೆಗಳಲ್ಲಿ ನೂರರ ಗಡಿ ದಾಟಿದೆ. ಅದರಲ್ಲೂ ಬೆಂಗಳೂರು ನಗರ 506 ಹೊಸ ಪ್ರಕರಣಗಳು, 9 ಸಾವು ದಾಖಲಿಸಿದೆ.



ದಕ್ಷಿಣ ಕನ್ನಡದಲ್ಲಿ 396 ಹೊಸ ಪ್ರಕರಣಗಳು ಕಂಡುಬಂದಿವೆ. 8 ಸಾವು ಸಂಭವಿಸಿವೆ. ಇದೇ ವೇಳೆ, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಕೇವಲ 200.



ನೆರೆಯ ಉಡುಪಿ, ಹಾಸನ, ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.



ಉಡುಪಿ 174, ಹಾಸನ 136, ಮೈಸೂರು 157, ಕೊಡಗು 96 ಮತ್ತು ಚಿಕ್ಕಮಗಳೂರು 90 ಹೊಸ ಪ್ರಕರಣಗಳು ಕೊರೋನಾ ಪಟ್ಟಿಗೆ ಸೇರಿದೆ.





ಬುಧವಾರ ಮೂರು ಜಿಲ್ಲೆಗಳಲ್ಲಿ ಕೋರೋನಾ ಶೂನ್ಯ ದಾಖಲೆ ಮಾಡಿತ್ತು. ಆದರೆ, ಗುರುವಾರ ಯಾವುದೇ ಜಿಲ್ಲೆಯಲ್ಲಿ ಶೂನ್ಯ ದಾಖಲೆ ಇಲ್ಲ. ಕೇವಲ 10 ಜಿಲ್ಲೆಗಳಲ್ಲಿ ಒಂದಂಕೆಯ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ.

BREAKING NEWS
Loading latest news...
Join our WhatsApp Channel Powered By : Online Pudu