-->

Ramdas Prabhu died- ಕಾಂಗ್ರೆಸ್ ನಾಯಕ, ಮಾಜಿ ಕಾರ್ಪೊರೇಟರ್, ಉದ್ಯಮಿ ರಾಮದಾಸ್ ಪ್ರಭು ನಿಧನ

Ramdas Prabhu died- ಕಾಂಗ್ರೆಸ್ ನಾಯಕ, ಮಾಜಿ ಕಾರ್ಪೊರೇಟರ್, ಉದ್ಯಮಿ ರಾಮದಾಸ್ ಪ್ರಭು ನಿಧನ





ಕಾಂಗ್ರೆಸ್ ಪಕ್ಷದ ಮುಖಂಡ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಐ ರಾಮದಾಸ್ ಪ್ರಭು ಹೃದಯಾಘಾತದಿಂದ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು.



ಮೃತರು ತಂದೆ, ತಾಯಿ, ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.




ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಕಾರ್‌ಸ್ಟ್ರೀಟ್ ಪ್ರದೇಶದಲ್ಲಿ ಬಹಳಷ್ಟು ಜನಪ್ರಿಯರಾಗಿದ್ದರು.



ಮಹಾರಾಜ ಮಸಾಲ ಬ್ರ್ಯಾಂಡ್ ಮೂಲಕ ಮಂಗಳೂರು ಸಹಿತ ಕರಾವಳಿ ಜನರಿಗೆ ಮಸಾಲ ಹುಡಿಯ ಪರಿಮಳವನ್ನು ನೀಡಿದ್ದ ಯುವ ಉದ್ಯಮಿ ರಾಮದಾಸ್ ಅವರು ಕೊಡುಗೈ ದಾನಿಯೂ ಆಗಿದ್ದರು. ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಯಲ್ಲಿ ಅವರು ಮ್ಮನ್ನು ತೊಡಗಿಸಿದ್ದರು.



ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ, ಮಾಜಿ ಶಾಸಕರಾದ ಜೆ. ಆರ್. ಲೋಬೊ, ಐವನ್ ಡಿಸೋಜಾ, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಕಾಂಗ್ರೆಸ್ ನಾಯಕ ಮಿಥುನ್ ರೈ ಸೇರಿದಂತೆ ಹಲವು ಗಣ್ಯರು ಮೃತ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article