-->

Doctor's death in 2nd wave- ಕೊರೊನಾ 2ನೇ ಅಲೆಯಲ್ಲಿ ಮೃತಪಟ್ಟ ವೈದ್ಯರ ಸಂಖ್ಯೆ ಎಷ್ಟು ಗೊತ್ತಾ?

Doctor's death in 2nd wave- ಕೊರೊನಾ 2ನೇ ಅಲೆಯಲ್ಲಿ ಮೃತಪಟ್ಟ ವೈದ್ಯರ ಸಂಖ್ಯೆ ಎಷ್ಟು ಗೊತ್ತಾ?



ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟವರ ಪಟ್ಟಿಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ನೀಡಿದೆ.





ಕೋವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ದೇಶದಲ್ಲಿ ಒಟ್ಟು 594 ವೈದ್ಯರು ಮಹಾಮಾರಿಯ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿಯಲ್ಲಿಯೇ ವೈದ್ಯರ ಸಾವು ದಾಖಲಾಗಿದೆ.



ರಾಷ್ಟ್ರ ರಾಜಧಾನಿ ದೆಹಲಿಯ 107 ವೈದ್ಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಭಾರತದ ಬಿಹಾರದಲ್ಲಿ 96 ವೈದ್ಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 67 ವೈದ್ಯರು ಮತ್ತು ಕರ್ನಾಟಕದಲ್ಲಿ ಎಂಟು ಮಂದಿ ವೈದ್ಯರು ಮಹಾಮಾರಿಯ ಸೋಂಕಿಗೆ ಬಲಿಯಾಗಿದ್ದಾರೆ ಎಂಬುದನ್ನು ಏಮ್ಸ್‌ ವರದಿ ಖಚಿತಪಡಿಸಿದೆ ಎಂದು ಎಎನ್ ಐ ವರದಿ ಮಾಡಿದೆ.







ಕೊರೋನಾ ಮೊದಲ ಅಲೆಯಲ್ಲಿ ದೇಶದಲ್ಲಿ ಒಟ್ಟು 748 ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಆದರೆ ಇದೀಗ 2ನೇ ಅಲೆ ಆರಂಭವಾಗಿ ಕೇವಲ 3 ತಿಂಗಳಲ್ಲೇ 594 ಮಂದಿ ವೈದ್ಯರು ಜೀವ ಕಳೆದು ಕೊಂಡಿದ್ದಾರೆ.



ಪ್ರಮುಖವಾಗಿ ಆರೋಗ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಮಂದಿ ಸಿಬ್ಬಂದಿ ಜೀವ ಕಳೆದು ಕೊಳ್ಳುತ್ತಿದ್ದಾರೆ ಎಂದು ಐಎಂ ಅಧ್ಯಕ್ಷ ಡಾ. ಜೆ.ಎ. ಜೈಲಾಲ್ ಹೇಳಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article