-->

Opposition suggestion to control Covid |ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣ- ಶಶಿಧರ್ ಹೆಗ್ಡೆ ಆಡಳಿತಾತ್ಮಕ ಸಲಹೆ

Opposition suggestion to control Covid |ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣ- ಶಶಿಧರ್ ಹೆಗ್ಡೆ ಆಡಳಿತಾತ್ಮಕ ಸಲಹೆ




ಮಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾಮಾರಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆಯವರ ಆಡಳಿತಾತ್ಮಕ ಸಲಹೆಗಳು ನೀಡಿದ್ದಾರೆ.


ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ನೇತೃತ್ವದಲ್ಲಿ ನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಕುರತ ಸಭೆ ನಡೆಯಿತು.


ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಈ ಸಭೆಯಲ್ಲಿಉಪಸ್ಥಿತರಿದ್ದರು.


ಮಾಜಿ ಮೇಯರ್ ಹಾಗೂ ಕಳೆದ 5 ಅವಧಿಗಳಲ್ಲಿ ಸತತವಾಗಿ ಆಯ್ಕೆ ಗೊಂಡಿರುವ ಹಿರಿಯ ಅನುಭವಿ ಕಾರ್ಪೊರೇಟರ್ ಆಗಿರುವ ಎಂ. ಶಶಿಧರ ಹೆಗ್ಡೆಯವರು ಕೊರೊನಾ ಸಂಕಷ್ಟದ ಸಂಧರ್ಭಗಳಲ್ಲಿ ಆಡಳಿತಾತ್ಮಕ ಕ್ರಮಗಳ ಬಗ್ಗೆ ಪ್ರಮುಖ ಸಲಹೆಗಳನ್ನು ನೀಡಿದರು.


1. ಆಸ್ಪತ್ರೆಗಳಲ್ಲಿ ಆಕ್ಸಿಜನ್, ವ್ಯಾಕ್ಸಿನ್ ಮುಂತಾದವುಗಳ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿ ಕೊಂಡು ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ದೊರೆಯುವಂತೆ ಕೂಡಲೇ ತ್ವರಿತವಾಗಿ ಕ್ರಮಗಳನ್ನು ಕೈಗೊಳ್ಳುವುದು.


2. ವಾರ್ಡ್ ಮಟ್ಟದಲ್ಲಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಕೊರೊನಾ ರೋಗಿಗಳು ಕುಟುಂಬ ಸದಸ್ಯರು ಮತ್ತು ನೆರೆಹೊರೆಯ ಮನೆಗಳಲ್ಲಿ ರೋಗ ಹರಡದಂತೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಡಳಿತದಿಂದ ಸೂಕ್ತ ವ್ಯವಸ್ಥೆ ಯನ್ನು ಮಾಡುವುದು.


3. ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟ ಗೊಳಗಾದ ಕುಟುಂಬ ಗಳಿಗೆ ನಗರ ಪಾಲಿಕೆಯ ವತಿಯಿಂದ ದಿನಬಳಕೆಯ ವಸ್ತುಗಳ ಕಿಟ್ ಗಳನ್ನು ವಿತರಿಸ ಬೇಕು.


4. ದಿನಬಳಕೆ ಸಾಮಾಗ್ರಿಗಳನ್ನು ಮನೆ ಮತ್ತು ಅಪಾರ್ಟ್ ಮೆಂಟ್ ನಿವಾಸಿ ಗಳಿಗೆ ತಲುಪಿಸಿ ಕೊಡಲು ಜನರಲ್ ಪ್ರೊವಿಷನ್ ಸ್ಟೋರ್ ಗಳಿಗೆ ವಿಶೇಷ ವ್ಯವಸ್ಥೆ ಮಾಡುವುದು.


5. ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕು, ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಕಡಿಮೆ ಗೊಳಿಸಿ ರೋಗಿಗಳಿಗೆ ಅನುಕೂಲವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅನೇಕ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.


ನಗರಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ಈ ಸಂಕಷ್ಟವನ್ನು ಎದುರಿಸಲು ಸಂಪೂರ್ಣವಾಗಿ ಸಹಕಾರ ಮತ್ತು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

Ads on article

Advertise in articles 1

advertising articles 2

Advertise under the article