-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Hopelessness v/s Helplesness: ಪ್ರಸ್ತುತ ಪರಿಸ್ಥಿತಿ ಬಗ್ಗೆ ಹಿರಿಯ ಪತ್ರಕರ್ತ ಮನೋಜ್ ಬರೆಯುತ್ತಾರೆ...

Hopelessness v/s Helplesness: ಪ್ರಸ್ತುತ ಪರಿಸ್ಥಿತಿ ಬಗ್ಗೆ ಹಿರಿಯ ಪತ್ರಕರ್ತ ಮನೋಜ್ ಬರೆಯುತ್ತಾರೆ...




'ರೆಮ್‌ಡಿಸಿವಿರ್ ಕೊರತೆ, ಆಕ್ಸಿಜನ್ ಕೊರತೆ.... ಬೆಡ್ ಇಲ್ಲ... ವ್ಯಾಕ್ಸಿನ್ ಕೊರತೆ.. ಕೊರೋನಾ ಸುನಾಮಿಗೆ ತತ್ತರಿಸಿರುವ ಭಾರತದಲ್ಲಿರುವ ಸದ್ಯದ ಸ್ಥಿತಿ.. ಇಂತಹ ಪರಿಸ್ಥಿತಿಗೆ ಸರ್ಕಾರವನ್ನ ದೂಷಿಸುವುದೋ ಇಲ್ಲ ವೋಟ್ ಹಾಕುವಾಗ ತಮ್ಮನ್ನು ತಾವೇ ಮಾರಿಕೊಂಡ ಜನರನ್ನ ಹೊಣೆ ಮಾಡುವುದೋ ತಿಳಿಯುತ್ತಿಲ್ಲ.. ನೂರಾರು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬರುವ ರಾಜಕಾರಣಿಗಳು ಮತ್ತು ಸರ್ಕಾರಗಳಿಗೆ ಆದ್ಯತೆಗಳ ಬಗ್ಗೆ ಅರಿವಿಲ್ಲದಿರುವುದು ದುರಂತ. ಕಳೆದ 7 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆದ್ಯತೆಗಳ ಪಟ್ಟಿ ಹೇಗಿದೆ ನೋಡಿ..


ವಿಶ್ವದ ಅತೀ ದೊಡ್ಡ ಪ್ರತಿಮೆ- ಸರ್ದಾರ್‌ ವಲ್ಲಭಭಾಯಿ ಪಟೇಲ್‌ -3 ಸಾವಿರ ಕೋಟಿ

ಅತೀ ದೊಡ್ಡ ಸ್ಟೇಡಿಯಂ- ಮೊಟೇರಾ ಸ್ಟೇಡಿಯಂ-7 ಸಾವಿರ ಕೋಟಿ

ಕೇಂದ್ರ ಸರ್ಕಾರದ ಸಾಧನೆಗಳ ಪ್ರಚಾರಕ್ಕೆ-5 ಸಾವಿರ ಕೋಟಿ

ಪ್ರಧಾನಿ ಓಡಾಡಲು ಹೊಸ ಅತ್ಯಾಧುನಿಕ ವಿಮಾನ-8 ಸಾವಿರ ಕೋಟಿ

ವಿಸ್ಟಾ ಯೋಜನೆ- ಹೊಸ ಸಂಸತ್ ನಿರ್ಮಾಣ- 20 ಸಾವಿರ ಕೋಟಿ


ಇದು ಒಂದು ಸಣ್ಣ ಪಟ್ಟಿ.. ಸರ್ಕಾರದ ಆದ್ಯತೆ ಏನು ಎಂಬುದನ್ನ ಈ ಪಟ್ಟಿ ವಿವರಿಸುತ್ತೆ..


 ಸ್ಡೇಡಿಯಂ, ವಿಮಾನ, ಪ್ರತಿಮೆ, ಸಂಸತ್ ಭವನ ನಿರ್ಮಾಣ ಮಾಡುವ ಬದಲು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದರೆ ಇವತ್ತಿನ ಪರಿಸ್ಥಿತಿ ಬರುತ್ತಿತ್ತಾ? ಧರ್ಮ, ಜಾತಿ, ಮಂದಿರ, ಮಸೀದಿ, ಚರ್ಚ್, ಮೇಲೆ ವೋಟ್ ಕೇಳಿದವರನ್ನು ಗೆಲ್ಲಿಸಿ ಕಳುಹಿಸಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಲೇಬೇಕು..


ಇವತ್ತಿನ ದಿನ ಸರ್ಕಾರಗಳನ್ನು ಪ್ರಶ್ನಿಸುವ ಬದಲು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ಕೆಟ್ಟ ಸಂಪ್ರದಾಯ ಹುಟ್ಟಿಕೊಂಡಿದೆ. ಮಾಧ್ಯಮಗಳು ಸರ್ಕಾರಗಳ ಚೇಲಾಗಳಂತೆ ವರ್ತಿಸುತ್ತಿವೆ.. ಪ್ರಧಾನಿ, ಮುಖ್ಯಮಂತ್ರಿ, ಸಚಿವರು, ಶಾಸಕರು ತಪ್ಪು ಮಾಡಿದಾಗ ಪ್ರಶ್ನೆ ಮಾಡಲಾರದಷ್ಟು ಮಾಧ್ಯಮಗಳು ಅಸಹಾಯಕವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುರಂತವೇ ಸರಿ. ವ್ಯಕ್ತಿ ಪೂಜೆ ನಮ್ಮನ್ನು ಮತ್ತೆ ಜೀತಪದ್ಧತಿಗೆ ಕರೆದೊಯ್ಯುತ್ತದೆ ಮರೆಯಬೇಡಿ. ಆಡಳಿತ ನಡೆಸುವವರ ದೌರ್ಬಲ್ಯ ಮತ್ತು ತಪ್ಪುಗಳನ್ನು ಎತ್ತಿ ತೋರಿಸದಿದ್ದರೆ ಕಷ್ಟ.. ಯಾರೇ ಇರಲಿ, ಮೋದಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಹೀಗೆ ಯಾರೇ ಇರಲಿ ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾಗ, ಆದ್ಯತೆಗಳು ಬದಲಾದಾಗ ಪ್ರಶ್ನೆ ಮಾಡುವುದರಲ್ಲಿ ತಪ್ಪೇನಿದೆ..


ಕೊನೆಯಾದಾಗಿ, ಮುಂಬೈನಲ್ಲಿರುವ ಸ್ವಾಮಿ ನಾರಾಯಣ ಸ್ವಾಮಿ ಮಂದಿರದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದೆ.. 500 ಹಾಸಿಗೆಗಳ ಕೋವಿಡ್ ಸೆಂಟರ್ ತೆರೆದಿರುವ ನಾರಾಯಣಸ್ವಾಮಿ ಮಂದಿರ ಆಡಳಿತ ಮಂಡಳಿ ಎಲ್ಲರಿಗೂ ಮಾದರಿಯಾಗಿದೆ.. ಇದೇ ಧರ್ಮವನ್ನ ತಾನೇ ಎಲ್ಲರೂ ಪಾಲಿಸಬೇಕಾಗಿರೋದು... ನಾರಾಯಣ ಸ್ವಾಮಿ ಮಂದಿರದ ಫೋಟೋ ಕೂಡ ಇದೆ.. ನಮ್ಮ ರಾಜ್ಯದಲ್ಲಿರುವ ಸುತ್ತೂರು ಮಠ, ಸಿದ್ಧಗಂಗಾ ಮಠ, ಮೂರು ಸಾವಿರ ಮಠ, ಆದಿಚುಂಚನಗಿರಿ ಮಠ, ಸೇರಿದಂತೆ ಎಲ್ಲಾ ಮಠಗಳು ಕೋವಿಡ್ ಸೆಂಟರ್ ತೆರೆದು ಜನರಿಗೆ ಸಹಾಯ ಮಾಡಬಹುದಲ್ಲಾ.. 


ಜೀವನ ಪೂರ್ತಿ ಮಠ ಮಾನ್ಯಗಳಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ಭಕ್ತರ ಕೈ ಹಿಡಿಯಬಹುದಲ್ಲಾ.. ರಾಜಕಾರಣದಲ್ಲಿ ವ್ಯಕ್ತಿಪೂಜೆಯಿಂದ ಆಗುವ ಅಪಾಯವನ್ನ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.. ಆ ಫೋಟೋವನ್ನು ಕೂಡ ಹಾಕಿದ್ದೇನೆ..

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article