ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ರಾಜ್ಯದ ಪ್ರವಾಸೋದ್ಯಮ ಸಚಿವ ಯೋಗೀಶ್ವರ್ ಅವರನ್ನುತಮ್ಮ ಕೈಚಳಕದ ಮೂಲಕ ಬೆರಗುಗೊಳಿಸಿದರು.
ರಾಣಿ ಅಬ್ಬಕ್ಕ ಕ್ರೂಸ್‌ನಲ್ಲಿ ನಡೆದ ಪ್ರೆಸ್ ಕ್ಲಬ್ ದಿನಾಚರಣೆ ಸಂದರ್ಭದಲ್ಲಿ ತೇಲುವ ದೋಣಿಗೆ ಆಗಮಿಸಿದ ಯೋಗೀಶ್ವರ್ ಜಿಲ್ಲೆಯ ಪ್ರವಾಸೋದ್ಯಮದ ಸಾಧ್ಯತೆಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ತಮ್ಮ ಕೆಲ ಅಚ್ಚರಿಯ ಜಾದೂ ಪ್ರದರ್ಶಿಸಿದರು. ಇದನ್ನು ಕಣ್ಣಾರೆ ಕಂಡ ಅವರು ಬೆರಗುಗೊಂಡರು.
ಸೇರಿದ್ದ ಪತ್ರಕರ್ತರೂ ಇದರ ರಂಜನೆಯನ್ನು ಅನುಭವಿಸಿದರು.






