ಮಂಗಳೂರು: ಧರ್ಮಸ್ಥಳ ಮೂಲದ ದೆಹಲಿ ಜೆಟ್ ಏರೋಸ್ಪೆಸ್ ಉದ್ಯೋಗಿ ಪಂಜಾಬ್‌ನಲ್ಲಿ ನಿಗೂಢ ಸಾವು- ಕೊಲೆ ಶಂಕೆ


ಮಂಗಳೂರು: ಧರ್ಮಸ್ಥಳ ಮೂಲದ ದೆಹಲಿಯ ಜೆಟ್ ಏರೋಸ್ಪೆಸ್ ಉದ್ಯೋಗಿ ಪಂಜಾಬ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಧರ್ಮಸ್ಥಳದ ಬೋಳಿಯಾರ್ ನಿವಾಸಿಗಳಾದ ಸುರೇಂದ್ರ ಹಾಗೂ ಸಿಂಧೂದೇವಿಯವರ ಪುತ್ರಿ ಆಕಾಂಕ್ಷ ನಿಗೂಢವಾಗಿ ಮೃತಪಟ್ಟವರು.

ಪಂಜಾಬಿನ ಫಗ್ವಾಡಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿ‌ದ್ದ ಆಕಾಂಕ್ಷಾ ಆರು ಹಿಂಗಳ ಹಿಂದೆ ವೃತ್ತಿ ಜೀವನ‌ ಆರಂಭಿಸಿದ್ದರು. ಇದೀಗ ಅವರು ದೆಹಲಿಯಲ್ಲಿ ಏರೋಸ್ಪೆಸ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸದ್ಯ ಜಪಾನಿನಲ್ಲಿ‌ ಉದ್ಯೋಗ ಗಿಟ್ಟಿಸಿಕೊಂಡಿದ್ದ ಆಕಾಂಕ್ಷ ಶೈಕ್ಷಣಿಕ ಪ್ರಮಾಣ ಪತ್ರ ಪಡೆಯಲು ಪಂಜಾಬ್‌ಗೆ ತೆರಳಿದ್ದರು.

ಶೈಕ್ಷಣಿಕ ಪ್ರಮಾಣ ಪತ್ರ ಪಡೆದ ಬಳಿಕ ಮನೆಯವರಿಗೆ ಕರೆ ಮಾಡಿ ಮಾತಾಡಿದ್ದರು. ಆದರೆ ಅವರು ಮೇ 17 ರಂದು ನಿಗೂಢವಾಗಿ ಮೃತಪಟ್ಟಿದ್ದರು. ಸದ್ಯ ಹೆತ್ತವರು ಪಂಜಾಬ್‌ಗೆ ತೆರಳಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಯಾವ ಕಾರಣದಿಂದ ಮೃತಪಟ್ಟಿದ್ದಾರೆಂದು ಇನ್ನಷ್ಟೇ ತಿಳಿದು ಬರಬೇಕಿದೆ.