ಬೆಳ್ತಂಗಡಿ: ತುಂಬಿ ತುಳುಕಿದ ಕೆಎಸ್ಆರ್‌ಟಿಸಿ ಬಸ್- ಉಸಿರುಗಟ್ಟಿದ ಮಹಿಳೆ


ಬೆಳ್ತಂಗಡಿ: ಕೆಎಸ್ಆರ್‌ಟಿಸಿ ಬಸ್ಸು ತುಂಬಿ ತುಳುಕಿದ ಪರಿಣಾಮ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಉಸಿರುಗಟ್ಟಿ ತೊಂದರೆಗೊಳಗಾದ ಘಟನೆ ರವಿವಾರ ರಾತ್ರಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ನಡೆದಿದೆ

ರವಿವಾರ ಆಗಿದ್ದರಿಂದ ಕೆಎಸ್ಆರ್‌ಟಿಸಿ ಬಸ್‌ಗಳು ಫುಲ್ ರಶ್ ಆಗಿತ್ತು‌ ಜೊತೆಗೆ ಹೆಚ್ಚಿನ ಬಸ್‌ಗಳಿಲ್ಲದೆ ಇರುವ ಬಸ್‌ಗಳಿಗೆ ಪ್ರಯಾಣಿಕರು ಹತ್ತಿದ ಪರಿಣಾಮ ಬಸ್ ತುಂಬಿ ತುಳುಕಿದೆ. ಪರಿಣಾಮ ಬಸ್‌ನೊಳಗೆ ಇದ್ದ ಮಹಿಳೆಯೊಬ್ಬರು ಉಸಿರುಗಟ್ಟಿದ್ದಾರೆ‌. ತಕ್ಷಣ ಪ್ರಯಾಣಿಕರು ಮಹಿಳೆಯನ್ನು ಹೊತ್ತು ಹೊರ ಬಂದು ಶುಶ್ರೂಷೆ ನೀಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಬಸ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಸ್‌ಗಳನ್ನು ಕಡಿಮೆ ಆಪರೇಟ್ ಮಾಡುತ್ತಿದ್ದೀರಾ ಎಂದು ತರಾಟೆ ತೆಗೆದುಕೊಂಡು ಪುತ್ತೂರು ವಿಭಾಗದ ಕೆ‌ಎಸ್ಆರ್‌ಟಿಸಿ ಡಿಸಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.