ಮಂಗಳೂರು: ಪೆಹಲ್ಗಾಮ್ ದಾಳಿ ವೇಳೆ ಹಿಂದೂಗಳು ಉಗ್ರರಿಗೆ ತಲ್ವಾರ್ ತೋರಿಸಿದ್ರೆ ಸಾಕಿತ್ತು- ಕಲ್ಲಡ್ಕ ಪ್ರಭಾಕರ್ ಭಟ್


ಮಂಗಳೂರು: ಪೆಹಲ್ಗಾಮ್ ದಾಳಿ ವೇಳೆ ಹಿಂದೂಗಳು ಉಗ್ರರಿಗೆ ತಲ್ವಾರ್ ತೋರಿಸಿದ್ರೆ ಸಾಕಿತ್ತು. ಆಗ ಕಥೆಯೇ ಬೇರೆಯಾಗುತ್ತಿತ್ತು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮಂಜೇಶ್ವರದ ವರ್ಕಾಡಿಯಲ್ಲಿ ಹೇಳಿದ್ದಾರೆ.

ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಬೇಕು. ಆರು ಇಂಚಿನ ಚೂರಿ ಇಟ್ಟುಕೊಳ್ಳಲು ಲೈಸೆನ್ಸ್ ಬೇಡ. ಆದ್ದರಿಂದ ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಪೌಡರ್, ಬಾಚಣಿಗೆ ಜೊತೆಗೆ ಚೂರಿಯನ್ನು ಇಟ್ಟುಕೊಳ್ಳಿ ಎಂದು ಅವರು ಕರೆ ನೀಡಿದ್ದಾರೆ.




ಸಂಜೆ ಮೇಲೆ ಓಡಾಡಿದರೆ ನಿಮ್ಮ ಮೇಲೆ ಖಂಡಿತಾ ಅಕ್ರಮಣ ಮಾಡುತ್ತಾರೆ.‌ ಆಕ್ರಮಣ ಮಾಡಬೇಡಿ ಎಂದು ಬೇಡಿಕೊಂಡ್ರೆ ನಿಮ್ಮ ಕಥೆ ಮುಗಿಯಿತು.‌ ಅದರ ಬದಲು ಚೂರಿ ತೋರಿಸಿ ಸಾಕು ಅವರು ಹೆದರಿ ಓಡುತ್ತಾರೆ ಎಂದರು.

ಹಿಂದೂ - ಮುಸ್ಲಿಂ ಗಲಾಟೆಯೆಂದರೆ ಮುಸ್ಲಿಮರು  ಹೊಡಿಯುತ್ತಾರೆ ಹಿಂದೂಗಳು ಓಡುತ್ತಾರೆ ಎಂದು ಇತ್ತು. ಆದರೆ ಈಗ ಹಿಂದೂ ಕೇವಲ ತಿರುಗಿ ಬಿದ್ದಿದ್ದಾನೆ. ಇನ್ನು ಹೊಡಿಯಲಿಕ್ಕೆ ಶುರು ಮಾಡಲಿಲ್ಲ.‌ ನಾವು ಎದ್ದು ನಿಲ್ಲಬೇಕು. ಮನೆಯಲ್ಲಿ ಒಂದು ತಲ್ವಾರ್ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu