ಮಂಗಳೂರು: ಚಿಕ್ಕಮಗಳೂರಿಗೆ ಟೂರ್; ಸ್ವಿಮ್ಮಿಂಗ್‌ಫೂಲ್‌ಗೆ ತಲೆ ಕೆಳಗಾಗಿ ಹಾರಿದ ಮಡಿಕೇರಿ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ಸಾವು



ಮಂಗಳೂರು: ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ಕೊಡಗಿನ ಕುಶಾಲನಗರ ಮೂಲದ ಯುವಕನೋರ್ವನು ಸ್ವಿಮ್ಮಿಂಗ್ ಫೂಲ್‌ಗೆ ತಲೆ ಕೆಳಗಾಗಿ ಹಾರಿದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.

ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ಮಾಲಕ ನಿಶಾಂತ್ (32) ಮೃತಪಟ್ಟ ಯುವಕ. 


ಈಜಾಡುವುದಕ್ಕೆಂದು ನಿಶಾಂತ್ ಈಜುಕೊಳದ  ಮೇಲಿನಿಂದ ತಲೆ ಕೆಳಗಾಗಿ ಹಾರಿದ್ದಾರೆ. ಈ ಸಂದರ್ಭ ಅವರ ತಲೆಗೆ ತಳಪಾಯ ಡಿಕ್ಕಿ ಹೊಡೆದು ಈಜುಕೊಳದಲ್ಲೇ ಅಸ್ವಸ್ಥರಾಗಿದ್ದಾರೆ. ನೀರಿನಲ್ಲಿ ಅಂಗಾತ ಬಿದ್ದ ಅವರನ್ನು ಕೂಡಲೇ ಸ್ನೇಹಿತರು ಮೇಲಕ್ಕೆತ್ತಿ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಕೊನೆ ಕ್ಷಣದಲ್ಲಿ ನಿಶಾಂತ್ ನೀರಿಗೆ ಹಾರುವುದು ಮತ್ತು ಕೂಡಲೇ ಸ್ನೇಹಿತರು ಎತ್ತಿ ಆರೈಕೆ ಮಾಡಿರುವುದು ದೃಶ್ಯದಲ್ಲಿ ದಾಖಲಾಗಿದೆ.