ಭಾರತದ ಕರೆನ್ಸಿ ಈ ದೇಶಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ: ಈ ದೇಶದಲ್ಲಿ ಭಾರತೀಯ 1ರೂ. ಕರೆನ್ಸಿ ಬೆಲೆ 500ರೂ.


ಭಾರತದ ಆರ್ಥಿಕತೆ ಸದೃಢಶಾಲಿಯಾಗುತ್ತಿದೆ. ನೀವು ವಿದೇಶಕ್ಕೆ ಪ್ರಯಾಣಿಸಬೇಕಾದರೆ ಮತ್ತು ಬಜೆಟ್ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಈ ದೇಶಗಳು ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಹುದು.

ಈ ದೇಶದಲ್ಲಿ 1 ರೂ. ಮೌಲ್ಯವು 299.53 ವಿಯೆಟ್ನಾಮ್ ಡಾಂಗ್‌ಗೆ ಸಮಾನವಾಗಿದೆ. ವಿಯೆಟ್ನಾಂ ಆಗ್ನೇಯ ಏಷ್ಯಾದಲ್ಲಿನ ದೇಶ. ಈ ದೇಶ ಶ್ರೀಮಂತ ನಗರಗಳು ಮತ್ತು ಅತ್ಯುತ್ತಮ ಸಂಸ್ಕೃತಿಗೆ ಹೆಸರುವಾಸಿ. ವಿಶೇಷವೆಂದರೆ ಭಾರತೀಯ ಕರೆನ್ಸಿಗೆ ಹೋಲಿಸಿದರೆ ವಿಯೆಟ್ನಾಮ್ ಡಾಂಗ್ ದುರ್ಬಲವಾಗಿದೆ, ಇದು ಪ್ರವಾಸಿಗರಿಗೆ ಉತ್ತಮ ಆಯ್ಕೆಯಾಗಿದೆ.

ಲಾವೋಸ್

ಈ ಪಟ್ಟಿಯಲ್ಲಿ ಎರಡನೇ ಹೆಸರು ಆಗ್ನೇಯ ಏಷ್ಯಾದ ಲಾವೋಸ್‌ ಆಗಿದೆ. ಲಾವೋಸ್ ಶಾಂತಿಯುತ ಪರಿಸರ ಮತ್ತು ಪರ್ವತಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸುಂದರವಾದ ಬೌದ್ಧ ವಿಹಾರಗಳಿವೆ. ಈ ದೇಶದ ಕರೆನ್ಸಿ ಲಾವೋಟಿಯನ್ ಕಿಪ್ ಆಗಿದೆ. ಇಲ್ಲಿ ಭಾರತೀಯ 1 ರೂಪಾಯಿಯು 261.52 ಲಾವೋಷಿಯನ್ ಕಿಪ್‌ಗೆ ಸಮ.  ಆದ್ದರಿಂದ ಈ ದೇಶದಲ್ಲಿ ಪ್ರಯಾಣಿಸಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ಶ್ರೀಲಂಕಾ

ಶ್ರೀಲಂಕಾ ಭಾರತದ ದಕ್ಷಿಣದಲ್ಲಿದೆ. ಈ ದೇಶ ಭಾರತದೊಂದಿಗೆ ವಿಶಿಷ್ಟವಾದ ಧಾರ್ಮಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ಕರೆನ್ಸಿಯ ಬಗ್ಗೆ ಮಾತನಾಡುವುದಾದರೆ, ಭಾರತೀಯ 1 ರೂಪಾಯಿಯು 3.49 ಶ್ರೀಲಂಕಾದ ರೂಪಾಯಿಗಳಿಗೆ ಸಮಾನವಾಗಿದೆ. ಶ್ರೀಲಂಕಾ ಪ್ರಾಚೀನ ಕಡಲತೀರಗಳು, ಚಹಾ ತೋಟಗಳು ಮತ್ತು ಪಾರಂಪರಿಕ ಕಟ್ಟಡಗಳನ್ನು ಹೊಂದಿದೆ. ಇದು ಇಲ್ಲಿನ ವಿಶೇಷವಾಗಿದೆ. ಯಾರಾದರೂ ಇಲ್ಲಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ನೀವು ರಾಷ್ಟ್ರೀಯ ಉದ್ಯಾನವನ ಮತ್ತು ಪ್ರಶಾಂತ ಕಡಲತೀರಗಳಿಗೆ ಭೇಟಿ ನೀಡಬಹುದು.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ, ದೇಶ ಭಾರತೀಯ ಕರೆನ್ಸಿಗಿಂತ ದುರ್ಬಲವಾಗಿದೆ. ಈ ದೇಶವು ಅದರ ಕೆ-ಪಾಪ್ ಮತ್ತು ಕೆ- ಡ್ರಾಮಾದಿಂದ ಹೆಚ್ಚು ಪ್ರಸಿದ್ಧಿ ಹೊಂದಿದೆ. ನೀವು ಇಲ್ಲಿಗೆ ಭೇಟಿ ನೀಡಲು ಬಯಸಿದರೆ, ನಿಮ್ಮ ಬಜೆಟ್ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. 1 ಭಾರತೀಯ ರೂಪಾಯಿ  ದಕ್ಷಿಣ ಕೊರಿಯಾದ 16 ವೊನ್‌ಗೆ ಸಮವಾಗಿದೆ. ಶ್ರೀಮಂತ ತಂತ್ರಜ್ಞಾನ ಮತ್ತು ಸಂಸ್ಕೃತಿಯಿಂದಾಗಿ ಈ ದೇಶವು ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಸಿಯೋಲ್‌ನ ಬೀದಿಗಳಲ್ಲಿ ನೀವು ದೇಶದ ಆಧುನಿಕ ಸಂಸ್ಕೃತಿಯನ್ನು ಅನುಭವಿಸಬಹುದು. 

ಹಂಗೇರಿ

ಭಾರತೀಯ 1ರೂಪಾಯಿಯು 4.49 ಹಂಗೇರಿಯನ್ ಫೋರಿಂಟ್‌ಗೆ ಸಮ. ಹಂಗೇರಿ, ಮಧ್ಯ ಯುರೋಪಿನ ದೇಶ, ಅದರ ವಾಸ್ತುಶಿಲ್ಪ ಮತ್ತು ಉಷ್ಣ ಸ್ನಾನಗೃಹಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಆಹಾರವು ಅತ್ಯುತ್ತಮವಾಗಿದೆ ಮತ್ತು ಪ್ರವಾಸಿಗರು ಇದನ್ನು ತುಂಬಾ ಇಷ್ಟಪಡುತ್ತಾರೆ. ಈ ದೇಶದ ರಾಜಧಾನಿ ಬುಡಾಪೆಸ್ಟ್ ರಾತ್ರಿಜೀವನ ಮತ್ತು ಸುಂದರವಾದ ಡ್ಯಾನ್ಯೂಬ್ ನದಿಗೆ ಹೆಸರುವಾಸಿಯಾಗಿದೆ.

ಕಾಂಬೋಡಿಯಾ

ಕಾಂಬೋಡಿಯಾ ತನ್ನ ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದು ಭಾರತೀಯ ಕರೆನ್ಸಿಗಿಂತ ದುರ್ಬಲವಾಗಿದೆ, ಆದ್ದರಿಂದ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಭಾರತೀಯ ರೂಪಾಯಿ 1 ಅಲ್ಲಿನ 48.37 ಕಾಂಬೋಡಿಯನ್ ರಿಯಲ್‌ಗೆ ಸಮ. ಇಲ್ಲಿಗೆ ಹೋಗಿ ವಾಸಿಸಲು ಸಾಕಷ್ಟು ಅಗ್ಗವಾಗಿದೆ. 

ಇಂಡೋನೇಷ್ಯಾ

ಇಂಡೋನೇಷ್ಯಾ ಒಂದು ಭವ್ಯವಾದ ದ್ವೀಪಸಮೂಹವಾಗಿದೆ, ಇದು 17 ಸಾವಿರಕ್ಕೂ ಹೆಚ್ಚು ದ್ವೀಪಗಳ ಸಮೂಹವಾಗಿದೆ. ಬಹುತೇಕ ಎಲ್ಲರಿಗೂ ಬಾಲಿ ಪರಿಚಯವಿದೆ ಮತ್ತು ಜನರು ಇಲ್ಲಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಈ ದ್ವೀಪವು ಸುಂದರವಾದ ಸಂಸ್ಕೃತಿ, ಭವ್ಯವಾದ ಅರಣ್ಯ ಮತ್ತು ಸಮುದ್ರ ಜೀವನಕ್ಕೆ ಹೆಸರುವಾಸಿಯಾಗಿದೆ.  1 ಭಾರತೀಯ ರೂಪಾಯಿ 185.44 ಇಂಡೋನೇಷಿಯನ್ ರೂಪಾಯಿಗೆ ಸಮಾನವಾಗಿದೆ.

ಇರಾನ್

ಇರಾನ್ ತನ್ನ ಪರ್ಷಿಯನ್ ಇತಿಹಾಸ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದಾಗಿ ಸುದ್ದಿಯಲ್ಲಿ ಉಳಿದಿದೆ. ಈ ದೇಶದ ಭವ್ಯವಾದ ವಾಸ್ತುಶಿಲ್ಪಿಗಳು ಮತ್ತು ಐತಿಹಾಸಿಕ ಸ್ಥಳಗಳು ನಿಮ್ಮನ್ನು ಆಕರ್ಷಿಸುತ್ತವೆ. ಭಾರತೀಯ ರೂಪಾಯಿಗೆ ಹೋಲಿಸಿದರೆ ಈ ದೇಶದ ಕರೆನ್ಸಿ ತುಂಬಾ ದುರ್ಬಲವಾಗಿದೆ. 1 ಭಾರತೀಯ ರೂಪಾಯಿ 498.83 ಇರಾನಿನ ರಿಯಾಲ್‌ಗೆ ಸಮ. ನೀವು ಇಲ್ಲಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಇದು ನಿಮ್ಮ ಬಜೆಟ್‌ನ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.