ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆಗೆ ದುಬಾರಿ ಪ್ರಾಡಕ್ಟ್ ಬಳಸದಿರಿ: ಆರೋಗ್ಯಕರ ತುಟಿಗಳಿಗೆ ಇಲ್ಲಿದೆ ಟಿಪ್ಸ್


ಬೆಂಗಳೂರು: ನಿಮ್ಮ ತುಟಿಗಳನ್ನು ಆರೋಗ್ಯಕ ಮತ್ತು ಸುಂದರವಾಗಿಡಲು ಹಾಗೂ ಆರೋಗ್ಯಕರ ತುಟಿಗಳ ಆರೈಕೆ ಸೀಕ್ರೆಟ್ ಟಿಪ್ಸ್‌ಗಳು ಇಲ್ಲಿವೆ ನೋಡಿ.

ತುಟಿಗಳ ಆರೋಗ್ಯಕ್ಕೆ ಕೆಲವರು ದುಬಾರಿ ಪ್ರಾಡಕ್ಟ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಸ್ನಾನದ ಬಳಿಕ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಉತ್ತಮ. ಸ್ನಾನದ ಬಳಿಕ ನಿಮ್ಮ ತುಟಿಗಳನ್ನು ಟವೆಲ್‌ನಿಂದ ಸ್ಟ್ರಬ್ ಮಾಡಿ. ಅತಿಯಾಗಿ ತುಟಿ ಒಡೆಯುವ ಸಮಸ್ಯೆಯಿದ್ದಲ್ಲಿ ಮಲಗುವ ಮುನ್ನ ನಿಮ್ಮ ತುಟಿಗಳಿಗೆ ತುಪ್ಪ ಹಚ್ಚಿದ್ದಲ್ಲಿ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಧೂಮಪಾನವು ತುಟಿಗಳನ್ನು ಕಪ್ಪಾಗಿಸುತ್ತದೆ. ಅದರಿಂದ ದೂರವಿರಿ.

ಪ್ರಕೃತಿಯಲ್ಲಿಯೇ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಇವುಗಳ ಸರಿಯಾದ ಬಳಕೆಯಿಂದ ಪರಿಹಾರ ಕಂಡುಕೊಳ್ಳಬಹುದು. ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಅರಿಶಿನವನ್ನು ಸೇವಿಸಿ.