ಕಲಬುರಗಿ: ಜಿಲ್ಲೆಯ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನ್ಯೂಲೈಫ್ ಆಸ್ಪತ್ರೆಯ ಹೈಲೈಟ್ ಬೋರ್ಡ್‌ಗಾಗಿ ತಗುಲಿಸಿರುವ ಕಂಬದಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶಕ್ಕೊಳಗಾಗಿ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.
ಶಹಾಪುರ ಪಟ್ಟಣದ ಬಿ.ಬಿ.ರೋಡ್ ನಿವಾಸಿ ಮುಹಮ್ಮದ್ ಇರ್ಷಾದ್ ಮೃತಪಟ್ಟ ದುರ್ದೈವಿ.
ಇರ್ಷಾದ್‌ರವರ ಗರ್ಭಿಣಿ ಸಹೋದರಿಯನ್ನು ಚಿಕಿತ್ಸೆಗೆಂದು ಶನಿವಾರ ಶಹಾಪುರದಿಂದ ನ್ಯೂ ಲೈಫ್ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಅವರು ಆಸ್ಪತ್ರೆ ಆವರಣದಲ್ಲಿರುವ ಹೈಲೈಟ್ ಬೋರ್ಡ್ ಕಂಬವನ್ನು ಸ್ಪರ್ಶಿಸಿದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ವ್ಯವಸ್ಥೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.