ನಮ್ಮ ಕಣ್ಣ ಮುಂದೆ ಇರುವ ಹಲವು ಹಣ್ಣುಗಳು ಆರೋಗ್ಯಕ್ಕೆ ಹಲವು ಉಪಯೋಗ ನೀಡುತ್ತದೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಹಿಂದೂ ಸಂಪ್ರದಾಯದಲ್ಲಿ ಔದುಂಬರ ವೃಕ್ಷ ಎಂದೇ ಈ ಅತ್ತಿ ಮರಕ್ಕೆ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಫೈಕಸ್ ರೆಸೆಮೊಸಾ ಎಂದಾಗಿದೆ.
ಗೊಂಚಲಿನ ರೀತಿಯಲ್ಲಿ ಬಿಡುವ ಹಣ್ಣುಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇಲ್ಲಿದೆ ನೋಡಿ ಅತ್ತಿ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಉಪಯುಕ್ತ ಮಾಹಿತಿ.
ಹೊಟ್ಟೆ ನೋವಿನ ನಿವಾರಣೆಗೆ
ಅತ್ತಿ ಹಣ್ಣನ್ನು ಸೇವನೆ ಮಾಡಿದರೆ ಮುಟ್ಟಿನ ದಿನಗಳ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಅಲ್ಲದೆ ಹೆಣ್ಣಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬಿಳಿ ಮುಟ್ಟಿಗೂ ಈ ಅತ್ತಿ ಹಣ್ಣು ಪರಿಹಾರವಾಗಿದೆ. ಅತ್ತಿ ಹಣ್ಣನ್ನು ತಂದು ಚೆನ್ನಾಗಿ ಸೋಸಿ, ಹುಳುಗಳಿಲ್ಲದಂತೆ ಶುಚಿಗೊಳಿಸಿ ಅದರ ರಸವನ್ನು ಮಾಡಿ ಅದಕ್ಕೆ ಕಲ್ಲು ಸಕ್ಕರೆ ಸೇರಿಸಿ ಸೇವನೆ ಮಾಡಿದರೆ ಬಿಳಿ ಮುಟ್ಟು ನಿಯಂತ್ರಣಕ್ಕೆ ಬರುತ್ತದೆ.
ಬಾಯಿಹುಣ್ಣಿನ ನಿವಾರಣೆ
ಅತ್ತಿ ಮರದ ತೊಗಟೆಯನ್ನು ತಂದು ನೀರಿನಲ್ಲಿ ಕುದಿಸಿ ಚಿಟಿಕೆ ಸಕ್ಕರೆ ಹಾಕಿಕೊಂಡು ಕುಡಿದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ. ಇದರಿಂದ ದೇಹವೂ ತಂಪಾಗುತ್ತದೆ.
ಅತ್ತಿಕಾಯಿಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಕಲ್ಲುಸಕ್ಕರೆ ಹಾಗೂ ನೀರನ್ನು ಸೇರಿಸಿ ಬಾಯಿ ಮುಕ್ಕಳಿಸಿದರೆ ಮುಟ್ಟಿನ ಸಮಯದಲ್ಲಿ ಆಗುವ ಅಧಿಕ ರಕ್ತಸ್ರಾವ ನಿಲ್ಲುತ್ತದೆ.
ಅತ್ತಿ ಹಣ್ಣಿನ ರಸವನ್ನು ಗೋದಿ ಹಿಟ್ಟಿನಲ್ಲಿ ಮಿಶ್ರಣ ಮಾಡಿ ಬಾವುಗಳಿರುವ ಜಾಗದಲ್ಲಿ ಲೇಪನೆ ಮಾಡಿದರೆ ನೋವಿನಿಂದ ಊದಿಕೊಂಡಿರುವ ದೇಹದ ಭಾಗ ಸರಿಯಾಗುತ್ತದೆ.