ಅಬುದಾಬಿಯ ಲಕ್ಕಿ ಡ್ರಾದಲ್ಲಿ ಉಡುಪಿಯ ಯುವಕನಿಗೆ 49 ಕೋಟಿ ರೂ. ಬಹುಮಾನ



ಉಡುಪಿ: ಅಬುದಾಬಿಯ ಲಕ್ಕಿ ಡ್ರಾ ಒಂದರಲ್ಲಿ  ಉಡುಪಿಯ ಯುವಕನೋರ್ವನು 49 ಕೋಟಿ ರೂ. ಬಹುಮಾನ ಗಳಿಸಿದ್ದಾನೆ.

ಉಡುಪಿಯ ಕಾಪು ತಾಲೂಕು ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾ‌ರ್ ಬಹುಮಾನ ವಿಜೇತರಾಗಿದ್ದಾರೆ. ಯುವಕನಿಗೆ 20 ಮಿಲಿಯನ್ ದಿರಾಮ್ ಬಹುಮಾನ ಲಭಿಸಿದೆ. 

ಅಬುದಾಬಿಯಲ್ಲಿ ಬಿಗ್ ಟಿಕೆಟ್ ಲಕ್ಕಿ ಡ್ರಾ ನಡೆದಿತ್ತು. ಮುಖ್ಯ ಜಾಕ್ಪಾಟ್ ಜೊತೆಗೆ ಹಲವು ಹೆಚ್ಚುವರಿ ಬಹುಮಾನಗಳು ಇದ್ದ ಲಕ್ಕಿ ಡ್ರಾ ಇದಾಗಿತ್ತು. ನೇರ ಪ್ರಸಾರ ಡ್ರಾದಲ್ಲಿ ಬಹುಮಾನ ಘೋಷಣೆ ಮಾಡಲಾಯಿತು.

ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಸೇಲ್ಸ್ ವಿಭಾಗದಲ್ಲಿ ಶಾಂತನು ಶೆಟ್ಟಿಗಾರ್ ಕೆಲಸ ಮಾಡುತ್ತಿದ್ದರು. ಇವರು ಸ್ನೇಹಿತನೊಂದಿಗೆ ಸೇರಿ‌ಈ ಟಿಕೆಟ್ ಖರೀದಿಸಿದ್ದರು. ಬಹುಮಾನವನ್ನು ಸ್ನೇಹಿತನೊಂದಿಗೆ ಹಂಚಿಕೊಳ್ಳುವುದಾಗಿ‌‌ಅವರು ನಿರ್ಧರಿಸಿದ್ದಾರೆ. 

ಬಹುಮಾನದ ಹಣವನ್ನು ಏನು ಮಾಡುವುದು ಎಂದು ನಿರ್ಧರಿಸಿಲ್ಲ. ಕುಟುಂಬದೊಂದಿಗೆ ಶಾಂತನು ಸಂತೋಷ ಹಂಚಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಟ್ಟು ಪರಿಸರದಲ್ಲಿ ಶಾಂತನು ಕುಟುಂಬ ನೆಲೆಸಿದೆ.
BREAKING NEWS
Loading latest news...
Join our WhatsApp Channel Powered By : Online Pudu