-->
1000938341
ಕಂಗನಾ ರನೌತ್ ಗೆ ಕಪಾಳಕ್ಕೆ ಹೊಡೆದ ಮಹಿಳಾ ಸಿಐಎಸ್ಎಫ್ ಗೆ ಚಿನ್ನದುಂಗುರ ಗಿಫ್ಟ್

ಕಂಗನಾ ರನೌತ್ ಗೆ ಕಪಾಳಕ್ಕೆ ಹೊಡೆದ ಮಹಿಳಾ ಸಿಐಎಸ್ಎಫ್ ಗೆ ಚಿನ್ನದುಂಗುರ ಗಿಫ್ಟ್

ನವದೆಹಲಿ: ಮೊದಲ ಬಾರಿಗೆ ಸಂಸದೆಯಾಹಿ ಸಂಸತ್ ಪ್ರವೇಶಿಸಲು ಹೊರಟ‌ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಸಿಬ್ಬಂದಿ ಕೆನ್ನೆಗೆ ಬಾರಿಸಿದ್ದರು. ಈ ಘಟನೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಕೆಲವರು ಇದನ್ನು ಖಂಡಿಸಿದರೆ, ಇನ್ನು ಕೆಲವರು ಮಹಿಳಾ ಉದ್ಯೋಗಿಯನ್ನು ಬೆಂಬಲಿಸಿದ್ದರು. ಇದೀಗ ಆಕೆಯ ಕಾರ್ಯವನ್ನು ಮೆಚ್ಚಿ ಕೊಯಮತ್ತೂರಿನ ತಂತೈ ಪೆರಿಯಾರ್ ದ್ರಾವಿಡರ್ ಕಳಗಂ ಚಿನ್ನದ ಉಂಗುರ ಉಡುಗೊರೆಯಾಗಿ ಕಳುಹಿಸಲಾಗುತ್ತಿದೆ.

ಸಂಸದೆಯನ್ನು ಹೊಡೆದಿದ್ದಕ್ಕಾಗಿ ಹರಿಯಾಣ ಸರ್ಕಾರ ಮಹಿಳಾ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ರನ್ನು ಕರ್ತವ್ಯದಿಂದ ಅಮಾನತುಗೊಳಿಸಿತ್ತು. ಆದರೆ, ಪಂಜಾಬ್ ರೈತರು ಕುಲ್ವಿಂದರ್ ಕೌರ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ತಮಿಳುನಾಡಿನ ಪೆರಿಯಾರ್ ಅವರ ಅಭಿಮಾನಿಗಳ ಸಂಘವು ಕುಲ್ವಿಂದ‌ರ್ ಕೌರ್‌ಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸಲು ನಿರ್ಧರಿಸಿದೆ. ಕೊಯಮತ್ತೂರಿನ ತಂತೈ ಪೆರಿಯಾರ್ ದ್ರಾವಿಡರ್ ಕಳಗಂ (TPDK) 8 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ಘೋಷಿಸಿದ್ದು, ಈ ಸಂಗತಿ ಇದೀಗ ಭಾರಿ ಸಂಚಲನ ಮೂಡಿಸಿದೆ.

ಈ ಬಗ್ಗೆ ಟಿಪಿಡಿಕೆ ಪ್ರಧಾನ ಕಾರ್ಯದರ್ಶಿ ಕೋವೈ ರಾಮಕೃಷ್ಣನ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅವಮಾನಿಸಿದ ಕಂಗನಾ ರನೌತ್‌ಗೆ ಹೊಡೆದ ಸಿಐಎಸ್‌ಎಫ್‌ ಕಾನ್‌ಸ್ಟೆಬಲ್ ಕುಲ್ವಿಂದ‌ರ್ ಕೌ‌ರ್ ಅವರನ್ನು ನಾನು ಮೆಚ್ಚುತ್ತೇನೆ. ಈ ಸಂದರ್ಭದಲ್ಲಿ ನಾವು ಅವರಿಗೆ 8 ಗ್ರಾಂ ಚಿನ್ನದ ಉಂಗುರವನ್ನು ನೀಡಲು ನಿರ್ಧರಿಸಿದ್ದೇವೆ. ನಾವು ಪೆರಿಯಾರ್ ಅವರ ಮೂರ್ತಿಯೊಂದಿಗೆ ಉಂಗುರವನ್ನು ಕಳುಹಿಸುತ್ತೇವೆ. ನಮ್ಮ ಪ್ರತಿನಿಧಿಯು ಕುಲ್ವಿಂದ‌ರ್ ಅವರ ಮನೆಗೆ ರೈಲಿನಲ್ಲಿ ಅಥವಾ ವಿಮಾನದಲ್ಲಿ ಹೋಗಿ ಚಿನ್ನದ ಉಂಗುರದ ಜೊತೆಗೆ ಪೆರಿಯಾರ್ ಪುಸ್ತಕಗಳನ್ನು ಹಸ್ತಾಂತರಿಸುತ್ತಾನೆ ಎಂದರು.

ಕಂಗನಾಗೆ ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿಕೊಂಡು ಕುಲ್ವಿಂದರ್ ಕೌರ್, ತಾನು ಮಾಡಿದ್ದು ಒಳ್ಳೆಯ ಕೆಲಸ ಎಂದರು. ಮೂರು ವರ್ಷಗಳ ಹಿಂದೆ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಕಂಗನಾ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆ ಆಂದೋಲನದಲ್ಲಿ ನನ್ನ ತಾಯಿ ಕೂಡ ಭಾಗವಹಿಸಿದ್ದರು. ರೈತರ ಪ್ರತಿಭಟನೆಯನ್ನು ಅವಮಾನಿಸಿದ್ದಕ್ಕೆ ನಾನು ಕಂಗನಾಗೆ ಹೊಡೆದೆ ಎಂದು ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕೌರ್ ಸಮರ್ಥನೆ ನೀಡಿದರು.

ಕಪಾಳಮೋಕ್ಷ ಘಟನೆಯ ಬಳಿಕ ಅಧಿಕಾರಿಗಳು ಆಕೆಯನ್ನು ಅಮಾನತು ಮಾಡಿ, ಬಂಧಿಸಲಾಗಿದ್ದು, ಕುಲ್ವಿಂದ‌ರ್ ಕೌರ್‌ಗೆ ಅನ್ಯಾಯ ಆಗಬಾರದು ಎಂದು ರೈತ ಸಂಘಗಳು ಆಗ್ರಹಿಸುತ್ತಿವೆ.

Ads on article

Advertise in articles 1

advertising articles 2

Advertise under the article