ಬೇಸಿಗೆಯಲ್ಲಿ ಸೇವಿಸಬೇಕಾದ ಹಣ್ಣುಗಳು
Thursday, May 30, 2024
ಬಿಸಿಲಿನ ಪ್ರತಾಪ ಹೆಚ್ಚುತ್ತಲೆಯಿದ್ದೆ ಇದರಿಂದ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಬರುತ್ತವೆ
ದೇಹವನ್ನು ತಂಪಾಗಿಡುವ ಆಹಾರ ವಸ್ತುಗಳನ್ನು ತಿನ್ನುವುದು ಉತ್ತಮ.ಸೀಸನ್ ಫುಡ್ಸ್ ವಾತಾವರಣಕ್ಕೆ ತಕ್ಕಂತೆ ನಮ್ಮ ಶರೀರವನ್ನು ಸರಿ ಹೊಂದಿಸುತ್ತದೆ. ಈಗ ಮೈಯನ್ನು ತಂಪಾಗಿಡುವ, ದೇಹದಲ್ಲಿ ಬಿಸಿಲಿನಲ್ಲಿ ಕಂಡು ಬರುವ ರೋಗಗಳ ವಿರುದ್ಧ ಹೋರಾಡುವ ಹಣ್ಣುನ್ನು ತಿನ್ನಬೇಕು
ಕಲ್ಲಂಗಡಿ
ಕಲ್ಲಂಗಡಿ ಹಣ್ಣು ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಲೈಕೋಪೆನೆ ಅಂಶ ತ್ವಚೆ ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡುತ್ತದೆ.
ದ್ರಾಕ್ಷಿ:
ಬಾಯಾರಿಕೆಯನ್ನು ನೀಗಿಸುವಲ್ಲಿ ದ್ರಾಕ್ಷಿ ಕೂಡ ಸಹಕಾರಿ. ಇದು ರಕ್ತವನ್ನು ಶುದ್ದೀಕರಿಸಿ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳ ವಿರುದ್ಧ ಹೋರಾಡುತ್ತದೆ. ದ್ರಾಕ್ಷಿ ಬೀಜ ಕ್ಯಾನ್ಸರ್ ತಡೆಗಟ್ಟುವ ಉತ್ತಮ ಮದ್ದಾಗಿದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ, ನರಗಳಿಗೂ ಒಳ್ಳೆಯದು.
ಮಾವಿನ ಹಣ್ಣು:
ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣಿನಲ್ಲಿ ಕಬ್ಬಿಣದಂಶ ಹಾಗೂ ಸೆಲೆನಿಯಮ್(selenium) ಅಧಿಕವಿದೆ.
ಪೈನಾಪಲ್:
ಇದರಲ್ಲಿ ಬೊಮೆಲಿಯಾನ್ (bromelian) ಎಂಬ ಎಂಜೈಮ್ಸ್ ಇದ್ದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಉರಿಯೂತ ಸಮಸ್ಯೆ ಉಂಟಾಗದಂತೆ ಆರೋಗ್ಯ ಕಾಪಾಡುತ್ತದೆ.
ಎಳನೀರು:
ಎಳನೀರನ್ನು ಬೇಸಿಗೆಯಲ್ಲಿ ಕಮ್ಮಿಯೆಂದರೂ 3-4 ಕುಡಿಯುವುದು ಒಳ್ಳೆಯದು. ಇದು ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುವುದಲ್ಲದೆ, ದೇಹದ ಉಷ್ಣಾಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಪಪ್ಪಾಯಿ:
ಹಣ್ಣಾದ ಪಪ್ಪಾಯಿ ದೇಹವನ್ನು ತಂಪಾಗಿಟ್ಟು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.