-->
1000938341
ಮತದಾನ ಗುರುತಿನ ಚೀಟಿ ಇಲ್ಲದಿದ್ದರೆ ಓಟು ಹಾಕುವುದು ಹೇಗೆ

ಮತದಾನ ಗುರುತಿನ ಚೀಟಿ ಇಲ್ಲದಿದ್ದರೆ ಓಟು ಹಾಕುವುದು ಹೇಗೆರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಪ್ರಾರಂಭ ಆಗುತ್ತಿದೆ ಏ.26ರ ಬೆಳಿಗ್ಗೆ  7 ರಿಂದ ಸಂಜೆ 6 ಗಂಟೆವರೆಗೂ 
ಮೊದಲ ಹಂತದ ಚುನಾವಣೆ ನಡೆಯಲಿದೆ . 6 ಗಂಟೆ ನಂತರ ಮತಗಟ್ಟಿಗೆ ನೋ ಎಂಟ್ರಿ ಬೋರ್ಡ್ ಹಾಕಲಾಗುತ್ತದೆ.14 ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆ ನಡೆಸಿಕೊಂಡಿದೆ . ಲೋಕಸಭೆ ಚುನಾವಣೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾನ ಮಾಡಲು ಮತದಾರರ ಗುರುತಿನ ಚೀಟಿ ತೆಗೆದುಕೊಂಡು ಹೋಗುವುದು ಅಗತ್ಯ . ಮತದಾರರ ಗುರುತಿನ ಚೀಟಿ ಮರೆತು ಹೋದರೆ ಏನು ಮಾಡುವುದು  ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದ ದಾಖಲೆಗಳ ವಿವರ ಇಲ್ಲಿದೆ 

* ಆಧಾರ್ ಕಾರ್ಡ್
* ಜಾಬ್ ಕಾರ್ಡ್
* ಡ್ರೈವಿಂಗ್ ಲೈಸನ್ಸ್
* ಪಾನ್ ಕಾರ್ಡ್
* ಭಾರತೀಯ ಪಾಸ್‌ ಪೋರ್ಟ್
* ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ
* ಎನ್‌ಪಿಆರ್ ಅಡಿಯಲ್ಲಿ  ಸ್ಮಾರ್ಟ್ ಕಾರ್ಡ್
* ಅಂಚೆ ಕಚೇರಿ ನೀಡಿದ ಭಾವಚಿತ್ರವಿರುವ ಪಾಸ್‌ ಬುಕ್‌
* ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
* ರಾಜ್ಯ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿರುವ ಸೇವಾ ಗುರುತಿನ ಚೀಟಿ
* ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು
* ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಕಾರ್ಡ್) ಪತ್ರದ ಮೂಲ ಪ್ರತಿಗಳನ್ನು ಮತದಾನದ ವೇಳೆ ಪರ್ಯಾಯ ದಾಖಲೆಗಳನ್ನಾಗಿ ಬಳಸಬಹುದು ಎಂದು ಹೇಳಲಾಗಿದೆ.
ಮತದಾನ ನಿಮ್ಮ ಹಕ್ಕು. ಕಡ್ಡಾಯವಾಗಿ ಮತದಾನ ಮಾಡಿ ಸದೃಢ ದೇಶದ ಬೆಳವಣಿಗೆ ಸಹಕರಿಸಿ. ಇಲ್ಲದಿದ್ದರೆ ಏನು ಮಾಡುವುದು 

Ads on article

Advertise in articles 1

advertising articles 2

Advertise under the article