-->
1000938341
ಬೇಸಿಗೆಯಲ್ಲಿ ನಮ್ಮ  ಜೀವನ  ಶೈಲಿ ಹೇಗಿರಬೇಕು

ಬೇಸಿಗೆಯಲ್ಲಿ ನಮ್ಮ ಜೀವನ ಶೈಲಿ ಹೇಗಿರಬೇಕು


ಬೇಸಿಗೆ ಕಾಲದಲ್ಲಿ  ಬಿಸಿಲಿನ ತಾಪ ಹೆಚ್ಚಿರುವುದರಿಂದ ಬಿಸಿಲಿನಿಂದಾಗಿ ಶರೀರದಲ್ಲಿ ವಾತ ವೃದ್ಧಿಯಾಗುತ್ತದೆ. ಜೀರ್ಣಶಕ್ತಿ ದುರ್ಬಲವಾಗಿರುತ್ತದೆ . ಹಾಗಾಗಿ ಅಗ್ನಿಯನ್ನು ವೃದ್ಧಿಪಡಿಸಿ ಶರೀರಕ್ಕೆ ತಂಪನ್ನು ಮತ್ತು ಬಲವನ್ನು ಕೊಡುವ ಆಹಾರ - ಪಾನೀಯಗಳನ್ನು  ಜೀವಿಸುವುದು ಉತ್ತಮ

ಯಾವ ರೀತಿಯ ಆಹಾರವನ್ನು  ಸೇವಿಸುವುದು ಒಳ್ಳೆಯದು :
ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಸ್ವತಃ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಿರುವುದು ಉತ್ತಮ
ಹಳೆಯ ಅಕ್ಕಿ, ಗೋಧಿಯ ಪದಾರ್ಥಗಳು, ಮೆಂತ್ಯ, ಬೇಳೆ-ಕಾಳುಗಳ ಬಳಕೆ ಮಿತವಾಗಿ ಬಳಸಿ ಬಳಸಿದ್ದರು  ಸ್ವಲ್ಪ ತುಪ್ಪವನ್ನು ಸೇರಿಸಿ ಸಂಸ್ಕರಿಸಿ ಬಳಸುವುದು ಒಳ್ಳೆಯದು
ಕೊತ್ತಂಬರಿ, ಕರಿಬೇವು, ಗಣಿಕೆ, ಕೀರೆ-ಕಿಲಕೀರೆ-ಮುಳ್ಳುಕೀರೆ, ದಂಟು (ಹರಿವೆ) ಇತ್ಯಾದಿ ಸೊಪ್ಪುಗಳು, ಹಾಲು, ಕಡೆದ ಮಜ್ಜಿಗೆ (ಬೆಣ್ಣೆ
ತೆಗೆಯದೆ ಬಳಸಿ .
ಮಾವು, ಹಲಸು ಇತ್ಯಾದಿ ತಂಪನ್ನುಂಟುಮಾಡುವ ಹಣ್ಣುಗಳನ್ನೂ ಬಳಸಿ
ಅತಿ ಉಪ್ಪು-ಹುಳಿ-ಖಾರ ಪದಾರ್ಥಸೇವನೆ ಬೇಡ

ಎಂಥ ಪಾನೀಯಗಳನ್ನು ಬಳಸುವುದು ಉತ್ತಮ
ಎಳನೀರು ಅಥವಾ ಶರೀರಕ್ಕೆ ತಂಪನ್ನುಂಟುಮಾಡುವ ಇನ್ನಿತರ ಪದಾರ್ಥಗಳನ್ನೂ ಬಳಸಿ
ಶ್ರೀಗಂಧ / ಲಾವಂಚ /ಕಮಲದ ಗಡ್ಡೆ / ಧನಿಯಾ (ಕೊತ್ತಂಬರಿ ಬೀಜ) ಇತ್ಯಾದಿಗಳನ್ನು ಸೇರಿಸಿ ಬೆಳಿಗ್ಗೆ ಕುದಿಸಿಟ್ಟುಕೊಂಡು ತಣ್ಣಗಾದ /
ಎಳಬೆಚ್ಚನೆಯ ನೀರು ದಿನವಿಡೀ ಬಳಸಿ
ಈ ಕಾಲದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.

ಯಾವ ರೀತಿ ಚಟುವಟಿಕೆ ಉತ್ತಮ ಬೇಸಿಗೆಯಲ್ಲಿ
ಹತ್ತಿಯ ಬಟ್ಟೆಗಳನ್ನು ಧರಿಸುವುದು.
ತಣ್ಣೀರಿನ ಸ್ನಾನ ಹಿತಕರವಾಗಿರುತ್ತದೆ 
ಹಗಲು ನಿದ್ರೆ ಸ್ವಲ್ಪ ಪ್ರಮಾಣದಲ್ಲಿ ಮಾಡಿ 
ತಂಪಾಗಿರುವ ಉದ್ಯಾನವನಗಳಲ್ಲಿ ವಿಹಾರ.
ವ್ಯಾಯಾಮ, ಅತಿಯಾದ ಬಿಸಿಲಿನ ಸೇವನೆ ಒಳ್ಳೆಯದಲ್ಲ.

Ads on article

Advertise in articles 1

advertising articles 2

Advertise under the article