ವಿಚಿತ್ರ ಘಟನೆ, ವ್ಯಕ್ತಿಯ ತಲೆ ಮೇಲೆ ಬೆಳೆದ ಕೊಂಬು
ವ್ಯಕ್ತಿಯ ತಲೆ ಮೇಲೆ ಬೆಳೆದ ಕೊಂಬು ಇದು ಎಲ್ಲರನ್ನೂ ಅಚ್ಚರಿ ಗೊಳಿಸಿದೆ ಹೌದು ಮನುಷ್ಯನ ತಲೆ ಮೇಲೆ ಪ್ರಾಣಿಗಳ ಕೊಂಬು ಬೆಳೆಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದ್ದು ನೆಟ್ಟಿಗರನ್ನು ಆಶ್ಚರ್ಯ ಮತ್ತು ಆಘಾತಕ್ಕೆ ಒಳಗೂ ಮಾಡಿದೆ ವೈರಲ್ ಆಗಿರುವ ಚಿತ್ರಗಳಲ್ಲಿ 60 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಯ ತಲೆಯ ಮೇಲೆ ಪ್ರಾಣಿಯಂತಹ ಕೊಂಬು ಬೆಳೆಯುತ್ತಿದೆ.
ಯಾರೀತ..? ಕೊಂಬು ಬೆಳೆದಿದ್ದು ಹೇಗೆ?
ವೃದ್ಧನನ್ನು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಾಜ್ಯ ಗ್ರಾಮದ ನಿವಾಸಿ ಶ್ಯಾಮ್ ಲಾಲ್ ಯಾದವ್ ಎಂದು ಗುರುತಿಸಲಾಗಿದೆ. 2004 ರಲ್ಲಿ ತಲೆಗೆ ಗಾಯವಾದ ನಂತರ ಅವರ ತಲೆಯ ಮೇಲೆ ವಿಚಿತ್ರವಾದ ಏನೋ ಬೆಳೆಯುತ್ತಿರುವುದನ್ನು ಅವರು ಗಮನಿಸಿದರು. ಅದು ಸಣ್ಣ ಕೊಂಬಿನಂತೆ ಕಾಣುತ್ತಿತ್ತು ಮತ್ತು ಅವರು ಅದನ್ನು ವರ್ಷಗಳಿಂದ ಕತ್ತರಿಸುತ್ತಿದ್ದನು. ಆದರೆ ಅದು ವೇಗವಾಗಿ ಬೆಳೆಯಲು ಪ್ರಾರಂಭಿಸಿದಾಗ, ಅವರು ವೈದ್ಯರನ್ನು ಸಂಪರ್ಕಿಸಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ.
ವೈದ್ಯ ಲೋಕ ಹೇಳುವುದೇನು :
ವೈದ್ಯರು ಇದನ್ನು “ಕಟಾನಿಯಸ್ ಕೊಂಬು"" ಅಥವಾ "ಪ್ರಾಣಿಗಳ ಕೊಂಬು" ಎಂದು ಕರೆಯುತ್ತಾರೆ ಇದು ಪ್ರಾಣಿಗಳ ಕೊಂಬಿನಂತೆ ಕಾಣುವ ಅಪರೂಪದ ರೀತಿಯ ಚರ್ಮದ ಬೆಳವಣಿಗೆಯಾಗಿದೆ. ಕೆಲವೊಮ್ಮೆ ಇದು ಚರ್ಮದ ಸಮಸ್ಯೆಯ ಸಂಕೇತವಾಗಿರಬಹುದು, ಅದು ಕ್ಯಾನ್ಸರ್ ಆಗಬಹುದು ಎಂದು ಎಚ್ಚರಿಕೆ. ನೀಡಿದ್ದಾರೆ. ಈ ಕೊಂಬುಗಳು ವಯಸ್ಸಾದವರಲ್ಲಿ ಹೆಚ್ಚು ಸಾಮಾನ್ಯವಾಗಿದೆ, 60 ರಿಂದ 70 ವರ್ಷ ವಯಸ್ಸಿನವರಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ. ಇದು ಚರ್ಮದಿಂದ ಅಂಟಿಕೊಂಡಿರುವ ಗಟ್ಟಿಯಾದ, ಹಳದಿ-ಕಂದು ಬಣ್ಣದ ವಸ್ತುವಿನಂತೆ ಕಾಣುತ್ತದೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರ ಮೇಲೂ ಸಮಾನವಾಗಿ ಪರಿಣಾಮ ಬೀರುತ್ತದೆ, ಆದಾಗ್ಯೂ ಪುರುಷರಲ್ಲಿ ಬೆಳವಣಿಗೆಯು ಕ್ಯಾನ್ಸರ್ ಆಗುವ ಸ್ವಲ್ಪ ಹೆಚ್ಚಿನ ಅವಕಾಶವಿದೆ ಎಂದು ಹೇಳಿದ್ದಾರೆ.