2ರೂ. ನೀಡಿ 72 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಖದೀಮ



ಬೆಂಗಳೂರು: ಆನ್‌ಲೈನ್‌ ಶಾಪಿಂಗ್‌ ಸಂದರ್ಭ ಸರಿಯಾದ ವಿಳಾಸ ನೀಡಿಲ್ಲವೆಂದು ಯಾಮಾರಿಸಿದ ಸೈಬರ್ ಖದೀಮನೋರ್ವ ಯುವತಿಗೆ 2ರೂ. ನೀಡಿ 72 ಸಾವಿರ ರೂ. ವಂಚಿಸಿದ್ದಾನೆ.

ಬೆಂಗಳೂರು ನಗರದ ವಿಲ್ಸನ್ ಗಾರ್ಡ್‌ನ್‌ದ 32 ವರ್ಷದ ಯುವತಿ ವಂಚನೆಗೊಳಗಾದವರು. ಮಾರ್ಚ್ 23ರಂದು ಯುವತಿಗೆ ಕರೆ ಮಾಡಿದ ಅಪರಿಚಿತ, ತಾವು ಆನ್ಲೈನ್ ಶಾಪಿಂಗ್ ಗೆ ನೀಡಿರುವ ಅಂಚೆ ವಿಳಾಸ ತಪ್ಪಾಗಿದೆ. ಆದ್ದರಿಂದ ತಾವು ಬುಕ್ಕಿಂಗ್ ಮಾಡಿರುವ ವಸ್ತುಗಳು ತಲುಪಿಸಲು ಸಾಧ್ಯವಿಲ್ಲ. ಸರಿಯಾದ ಮಾಹಿತಿ ನೀಡುವಂತೆ ಕೋರಿದ್ದಾನೆ. ಇದನ್ನು ನಂಬಿದ ಯುವತಿ, ಸರಿಯಾದ ವಿಳಾಸ ಕೊಟ್ಟಿದ್ದಾರೆ. ಇದಾದ ಮೇಲೆ ಲಿಂಕ್ ಕಳುಹಿಸಿ ಇದರ ಮೇಲೆ ಕ್ಲಿಕ್ ಮಾಡಿ 2 ರೂ. ಪಾವತಿಸುವಂತೆ ಕೋರಿದ್ದಾನೆ. ಅದಕ್ಕೆ ಯುವತಿ, ಪಾರ್ಸೆಲ್ ತಂದು ಕೊಟ್ಟಾಗ ಪಾವತಿ ಮಾಡುವುದಾಗಿ ಹೇಳಿದ್ದಾಳೆ.

ಅದಕ್ಕೆ ಸೈಬ‌ರ್ ವಂಚಕ, ನಾನೇ ನಿಮ್ಮ ವ್ಯಾಲೆಟ್‌ಗೆ 2 ರೂ. ಪಾವತಿ ಮಾಡುವುದಾಗಿ ಯಾಮಾರಿಸಿ ಬ್ಯಾಂಕ್ ಮಾಹಿತಿ ಪಡೆದು 5 ಸಾವಿರ ರೂ., 4 ಮತ್ತು 2 ಸಾವಿರ ರೂ. ಅಂತೆ ಹಂತಹಂತವಾಗಿ 72 ಸಾವಿರ ರೂ. ದೋಚಿದ್ದಾನೆ. ಮೊಬೈಲ್‌ಗೆ ಬಂದಿರುವ ಮೆಸೇಜ್ ನೋಡಿದ ಯುವತಿಗರ, ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದೆ. ತಕ್ಷಣ ಕೇಂದ್ರ ಸಿಇಎನ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu