-->

ತಮ್ಮ ಫಳ ಫಳ ಹೊಳೆಯುವ ಕೂದಲ ಕೇರ್ ಗೆ ಮಾಧುರಿ ದೀಕ್ಷಿತ್ ಹಾಕುವ ಎಣ್ಣೆ ಯಾವುದು ಗೊತ್ತೇ?

ತಮ್ಮ ಫಳ ಫಳ ಹೊಳೆಯುವ ಕೂದಲ ಕೇರ್ ಗೆ ಮಾಧುರಿ ದೀಕ್ಷಿತ್ ಹಾಕುವ ಎಣ್ಣೆ ಯಾವುದು ಗೊತ್ತೇ?


ಮುಂಬೈ: ಬಾಲಿವುಡ್‌ನ ನಟಿ ಮಾಧುರಿ ದೀಕ್ಷಿತ್ ಎಂದರೆ ಇಂದಿಗೂ ಪಡ್ಡೆ ಹುಡುಗರಿಗೆ ಸಖತ್ ಇಷ್ಟ. ಸೌಂದರ್ಯದ ಖನಿಯಾಗಿರುವ ಈ ನಟಿಯ ಬ್ಯೂಟಿ ಸಿಕ್ರೇಟ್ ಏನು ಎಂದು ಫ್ಯಾನ್ಸ್ ಕೇಳುತ್ತಿರುತ್ತಾರೆ. ಇದೀಗ ನಟಿ ತಮ್ಮ  ಫಳ..ಫಳ ಎಂದು ಹೊಳೆಯವ ಕೂದಲಿನ ಕೇರ್ ಹೇಗೆ ಮಾಡುತ್ತಾರೆಂದು ಹಂಚಿಕೊಂಡಿದ್ದಾರೆ.

90ರ ದಶಕದಲ್ಲಿ ಯುವಕರ ಹಾರ್ಟ್ ಬೀಟ್ ಅನ್ನು ಹೆಚ್ಚು ಮಾಡಿದ್ದೇ ಈ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್. ಒಂದು ಕಾಲದಲ್ಲಿ ಮಾಧುರಿ ದೀಕ್ಷಿತ್ ಅವರ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಜನತೆ ಸಾಲಿನಲ್ಲಿ ನಿಲ್ಲುತ್ತಿದ್ದರು. ಸದ್ಯ ಅವರ ವಯಸ್ಸು 58 ಆದ್ರೂ ಇನ್ನು ಮಾಧುರಿ ದೀಕ್ಷಿತ್ 20ರ ಯುವತಿಯರು ನಾಚುವಂತೆ ಕಾಣಿಸುತ್ತಾರೆ. ಇನ್ನು ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ್ರಂತೂ ಪಡ್ಡೆ ಹುಡುಗರ ಎದೆ ಝಲ್ ಝಲ್ ಅನ್ನೋದಂತೂ ಗ್ಯಾರಂಟಿ.

ಮಾಧುರಿ ದೀಕ್ಷಿತ್ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ನಟಿ ಆಗಾಗ್ಗೆ ಪಾಕವಿಧಾನಗಳು, ಸಲಹೆಗಳು ಮತ್ತು ಕೆಲವು ಟೀಪ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರ ಹೇರ್ ಕೇರ್ ಹೇಗೆ ಇರುತ್ತದೆ ಎನ್ನುವ ಸಿಕ್ರೇಟ್ ರಿವೀಲ್ ಆಗಿದೆ.

ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರಿ, ಇದು ಆರೋಗ್ಯಕರ ಕೂದಲಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ಅರ್ಧ ಕಪ್ ತೆಂಗಿನ ಎಣ್ಣೆ, 15-20 ಕರಿಬೇವಿನ ಎಲೆಗಳು, 1 ಟೀ ಚಮಚ ಮೆಂತ್ಯದ ಬೀಜಗಳು ಹಾಗೂ 1 ಸಣ್ಣ ತುರಿದ ಈರುಳ್ಳಿ ಇವುಗಳನ್ನು ಎಲ್ಲವನ್ನೂ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು ಎಂದು ಎಣ್ಣೆ ಮಾಡುವ ವಿಧಾನ ರಿವೀಲ್ ಮಾಡಿದ್ದಾರೆ. ಕುದಿ ಬಂದ ನಂತರ ಅದನ್ನು ತಣ್ಣಗೆ ಮಾಡಲು ಇಡಬೇಕು. ಸಂಪೂರ್ಣವಾಗಿ ಆರಿದ ಮೇಲೆ ಒಂದು ಬಾಟಲಿಯಲ್ಲಿ ಇದನ್ನು ಶೋಧಿಸಿ ಇಟ್ಟುಕೊಳ್ಳಬೇಕು. ಎರಡು ದಿನಗಳ ನಂತರ ಅದನ್ನು ಉಪಯೋಗಿಸ ಬೇಕಂತೆ. ಮೂರು ದಿನಕ್ಕೊಮ್ಮೆ ರಾತ್ರಿ ಇದನ್ನು ಚೆನ್ನಾಗಿ ತಲೆಗೆ ಮಸಾಜ್ ಮಾಡಿಕೊಂಡು ಮರುದಿನ ಬೆಳಗ್ಗೆ ತಲೆ ಸ್ನಾನ ಮಾಡಬೇಕಂತೆ.

1 ಕತ್ತರಿಸಿದ ಬಾಳೆಹಣ್ಣು, 2 ಚಮಚ ಕಪ್ ಮೊಸರು, 2 ಚಮಚ ಸ್ವಲ್ಪ ಜೇನುತುಪ್ಪ. ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ತಲೆಸ್ನಾನ ಮಾಡುವ 30-40 ನಿಮಿಷಗಳ ಮೊದಲು ತಲೆಗೆ ಚೆನ್ನಾಗಿ ಅಷ್ಟೆ ಮಾಡಿಕೊಳ್ಳಬೇಕು. 30-40 ನಿಮಿಷಗಳ ಬಳಿಕ ನೀವು ಬಳಸುವ ಶ್ಯಾಂಪೂವನ್ನು ಹಾಕಿ ತಲೆಗೂದಲನ್ನು ತೊಳೆದುಕೊಳ್ಳಬೇಕು. ಇದಾದ ಮೇಲೆ ಕಂಡೀಷನರ್ ಹಾಕದೇ ಇದ್ದರೆ ಒಳ್ಳೆಯದು. ಈ ಹೇರ್ ಮಾಸ್ಕ್ ಉಪಯೋಗಿಸುತ್ತಿದ್ದರೆ ಕೂದಲು ಸಾಫ್ಟ್ ಆಗಿ ಹೊಳೆಯುತ್ತಲಿರುತ್ತದೆ.

Ads on article

Advertise in articles 1

advertising articles 2

Advertise under the article