ಮಂಗಳೂರು: ತೋಟಬೇಂಗ್ರೆಯಲ್ಲಿ ಮೀನುಗಾರಿಕೆ - ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು
Friday, March 22, 2024
ಮಂಗಳೂರು: ತೋಟಬೆಂಗ್ರೆಯ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ಗಾಳಿ ಹಾಗೂ ನೀರಿನ ರಭಸಕ್ಕೆ ಸಿಲುಕಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಬೆಂಗ್ರೆಯ ನಿವಾಸಿ ಪ್ರಜೀತ್ ಎಂ ತಿಂಗಳಾಯ(15) ಮೃತಪಟ್ಟ ವಿದ್ಯಾರ್ಥಿ.
ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ಖರ್ಚಿಗೆಂದು, ತನ್ನ ತಂದೆಯೊಂದಿಗೆ ಪ್ರಜೀತ್ ಬೆಂಗ್ರೆ ಸಮುದ್ರದಲ್ಲಿ ಮಿನುಗಾರಿಕೆಗೆ ಹೋಗುತ್ತಿದ್ದ. ಗುರುವಾರ ಸಂಜೆ 5:30ಕ್ಕೆ ಮೀನುಗಾರಿಕೆಗೆ ತೆರಳಿದ್ದನು. ಈ ವೇಳೆ, ಗಾಳಿ ಮತ್ತು ನೀರಿನ ರಭಸಕ್ಕೆ ಸಿಲುಕಿ ಸಮುದ್ರದಲ್ಲಿ ನೀರು ಪಾಲಾಗಿದ್ದಾನೆ. ತಕ್ಷಣ ಆತನಿಗಾಗಿ ಸಮದ್ರದಲ್ಲಿ ಹುಡುಗಾಟ ನಡೆಸಲಾಗಿತ್ತು. ಆದರೆ ಸುಮಾರು ಸಂಜೆ 6:50ರ ವೇಳೆಗೆ ಅಲೆಗಳ ರಭಸಕ್ಕೆ ಆತ ಮೇಲೆ ಬಂದಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ಸಮುದ್ರದಿಂದ ಮೇಲಕ್ಕೆತ್ತಿ ಹಾಕಿ ಆಸ್ಪತ್ರೆಗೆ ದಾಖಲಿಸಿದ್ದರೂ, ಆತ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.