ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ 'ಡಿ ಬಾಸ್' ಭೇಟಿ

ಮಂಗಳೂರು: ಕೊರಗಜ್ಜ ದೈವದ ಆದಿಸ್ಥಳ ಕುತ್ತಾರು ಕ್ಷೇತ್ರಕ್ಕೆ ಭೇಟಿ‌ ನೀಡಿದ ಸ್ಯಾಂಡಲ್ ವುಡ್ 'ಡಿ ಬಾಸ್' ಕೊರಗಜ್ಜ ದೈವದ ದರ್ಶನ ಪಡೆದರು.

ಈ ವೇಳೆ ಕೊರಗಜ್ಜನ ಕ್ಷೇತ್ರದ ವತಿಯಿಂದ ನಟ ದರ್ಶನ್ ಗೆ ಗೌರವ ಸಮರ್ಪಣೆ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನಾನು ಕುತ್ತಾರು ಕೊರಗಜ್ಜ ದೈವದ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಈ ಹಿಂದೆ ನಾನು ಮಂಗಳೂರಿಗೆ ಬಹಳ ಸಲ ಬಂದಿದ್ದರೂ ಈ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಆದ್ದರಿಂದ ಈ ಕ್ಷೇತ್ರವನ್ನೊಮ್ಮೆ ನೋಡಿಕೊಂಡು ಹೋಗೋಣ ಎಂದು ಬಂದಿದ್ದೇನೆ. 




ಸಂಸದೆ ಸುಮಲತಾ ಬೆಂಬಲ ವಿಚಾರದ ಬಗ್ಗೆ ಮಾತನಾಡಿದ ದರ್ಶನ್, ಅಮ್ಮ ಅಮ್ಮನೇ. ನಾವು ಅವಳೊಂದಿಗೆನೇ‌ ಇರೋದು. ಬೇರೆಯವರಿಗಾಗಿ ಅಮ್ಮನನ್ನು ಬಿಡೋಕಾಗುತ್ತಾ? ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ಬೆಂಬಲಿಸುವ ಹೇಳಿಕೆ ನೀಡಿದರು.