-->
7.5 ಕೋಟಿ ರೂ. ನಿವ್ವಳ ಮೌಲ್ಯದ ಆಸ್ತಿ, ಹಣ, ಅಂತಸ್ತು ಇರುವ ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ

7.5 ಕೋಟಿ ರೂ. ನಿವ್ವಳ ಮೌಲ್ಯದ ಆಸ್ತಿ, ಹಣ, ಅಂತಸ್ತು ಇರುವ ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ


ಮುಂಬೈ: ಫೋಟೊದಲ್ಲಿರುವ ಈ ವ್ಯಕ್ತಿಯನ್ನೊಮ್ಮೆ ನೋಡಿ. ಈತ ಭಿಕ್ಷಾಟನೆಯಲ್ಲೇ ಜಾಗತಿಕವಾಗಿಯೇ ಶ್ರೀಮಂತ ಭಿಕ್ಷುಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಈತ ಮುಂಬೈ ನಿವಾಸಿ. ಹೆಸರು ಭರತ್ ಜೈನ್. ಈತ ಕೇವಲ ಭಾರತ ಮಾತ್ರವಲ್ಲ, ಜಾಗತಿಕವಾಗಿಯೇ ಅತ್ಯಂತ ಶ್ರೀಮಂತ ಭಿಕ್ಷುಕ ಎಂಬ ಪಟ್ಟವನ್ನು ಅಲಂಕರಿಸಿದ್ದಾನೆ. ಬಡತನದಲ್ಲಿ ಹುಟ್ಟಿಬೆಳೆದ ಭರತ್ ಜೈನ್ ಗೆ ಆರ್ಥಿಕ ಸಮಸ್ಯೆಯಿಂದ ತಮ್ಮ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ಮದುವೆಯಾದ ಇವರಿಗೆ ಇಬ್ಬರು ಪುತ್ರರಿದ್ದಾರೆ. ಭಿಕ್ಷಾಟನೆ ಮಾಡಿಯೇ ಇಬ್ಬರಿಗೂ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ.

ಭಿಕ್ಷಾಟನೆಯಲ್ಲಿ ಜೀವನ ಕಟ್ಟಿಕೊಂಡ ಭರತ್ ಜೈನ್ ನ ನಿವ್ವಳ ಮೌಲ್ಯ 7.5 ಕೋಟಿ ರೂ. ಆಗಿದೆ. ಅವರ ಮಾಸಿಕ ಆದಾಯ 60,000 ಮತ್ತು 75,000 ರೂ.ಗಳವರೆಗೂ ಇದೆ. ಮುಂಬೈನಲ್ಲಿ 1.4 ಕೋಟಿ ರೂ. ಮೌಲ್ಯದ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಥಾಣೆಯಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದು, ಇದು ತಿಂಗಳಿಗೆ 30,000 ರೂಪಾಯಿ ಬಾಡಿಗೆ ಆದಾಯವನ್ನು ತಂದುಕೊಡುತ್ತದೆ.

ಈ ಸಂಪತ್ತಿನ ಹೊರತಾಗಿಯೂ ಭರತ್, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ಇಂದಿಗೂ ಕಾಣಬಹುದು. ಪ್ರಸ್ತುತ ಪರೇಲ್‌ನಲ್ಲಿ ನೆಲೆಸಿರುವ ಭರತ್ ಅವರ ಕುಟುಂಬದ ಇತರ ಸದಸ್ಯರು ಸ್ಟೇಷನರಿ ಅಂಗಡಿಯೊಂದನ್ನು ನೋಡಿಕೊಳ್ಳುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

Ads on article

Advertise in articles 1

advertising articles 2

Advertise under the article