-->

ಕಡಬ: 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ಸತತ 7ಗಂಟೆಗಳ ಕಾರ್ಯಾಚರಣೆ

ಕಡಬ: 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ಸತತ 7ಗಂಟೆಗಳ ಕಾರ್ಯಾಚರಣೆಕಡಬ: ಇಲ್ಲಿನ ಕೋಡಿಂಬಾಳ ಗ್ರಾಮದಲ್ಲಿ ಬರೋಬ್ಬರಿ 13 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಸೆರೆ ಸಿಕ್ಕಿದೆ. 

ಮಾ.23ರಂದು ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಹಾವು ಬುಸುಗುಟ್ಟಿರುವ ಸದ್ದು ಕೇಳಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ. ಹೆಬ್ಬಾವು ಇರಬಹುದೆಂದು  ಹುಡುಕಾಟ ನಡೆಸಿದ್ದಾರೆ. ಆಗ ಹೆಬ್ಬಾವು ಬದಲಿಗೆ ಬೃಹತ್ ಗಾತ್ರದ ಕಾಳಿಂಗಸರ್ಪ ಕಾಣಸಿಕ್ಕಿದೆ. ಈ ವೇಳೆ ಕಾಳಿಂಗ ಸರ್ಪದ ಗಾತ್ರ ನೋಡಿ ಬೆಚ್ಚಿಬಿದ್ದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಸುಬ್ರಹ್ಮಣ್ಯದ ಉರಗ ರಕ್ಷಕ ಗೋಪಾಲ ಅವರನ್ನು ಕರೆಸಿದ್ದಾರೆ. ಅವರು ಸತತ 7 ಗಂಟೆಗಳ ಕಾಲ ಶ್ರಮವಹಿಸಿ ಈ ದೈತ್ಯ ಕಾಳಿಂಗವನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. 


ಕಾರ್ಯಾಚರಣೆ ವೇಳೆ ಈ ಕಾಳಿಂಗ ಸರ್ಪ ಕೋಪದಿಂದ ಜನರ ಮೇಲೆಯೇ ದಾಳಿಗೆ ಯತ್ನಿಸಿರುವ ಘಟನೆಯೂ ನಡೆದಿದೆ. ಸೆರೆ ಸಿಕ್ಕ ಈ ಕಾಳಿಂಗ ಸರ್ಪ ಬರೋಬ್ಬರಿ 13 ಅಡಿಗಳಷ್ಟು ಉದ್ದವಿದ್ದು ಅದನ್ನು ನೋಡಲೆಂದೇ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಆಹಾರ ಹುಡುಕಾಟದ ಸಂದರ್ಭ ಪ್ರಾಣಿಯೊಂದನ್ನು ಬೆನ್ನಟ್ಟುತ್ತಾ ಈ ಕಾಳಿಂಗ ಸರ್ಪ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಬೃಹತ್ ಗಾತ್ರದ ಹಾವನ್ನು ಸುರಕ್ಷಿತವಾಗಿ ಸುಬ್ರಹ್ಮಣ್ಯ ಸಮೀಪದ ದಟ್ಟ ಕಾಡಿನಲ್ಲಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article