ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣ- ವೃದ್ಧೆಯ ಮೃತ ದೇಹ ತುಂಡು ತುಂಡು ಆದ ಸ್ಥಿತಿಯಲ್ಲಿ ಪ್ಲಾಸ್ಟಿಕ್ ಡ್ರಮ್ ನಲ್ಲಿ ಪತ್ತೆ
Monday, February 26, 2024
ಬೆಂಗಳೂರು : ದಿನೇ ಹೆಚ್ಚು ತಿರುವ ಕೊಲೆ ಪ್ರಕರಣಗಳು ಅದರಲ್ಲೂ ಶವಗಳು ವಿಚಿತ್ರ ಸ್ಥಿತಿಗಳಲ್ಲಿ ಪತ್ತೆಯಾಗುತ್ತಿವೆ.
ಇದೀಗ ಅದೇ ರೀತಿ ನಗರದಲ್ಲಿ ವೃದ್ಧೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.ಶವವನ್ನು ಐದು ತಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುಂಬಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆಮೃತರನ್ನು ಸುಶೀಲಮ್ಮ (65) ಎಂದು ಗುರುತಿಸಲಾಗಿದೆ.
5 ಗಂಟೆ ಸುಮಾರಿಗೆ ಡ್ರಮ್‌ನಿಂದ ದುರ್ವಾಸನೆ ಬರಲಾರಂಭಿಸಿದೆ.ಈ ಹಿನ್ನೆಲೆ ಸಮೀಪದ ನಿವಾಸಿಗಳು ಇದನ್ನು ಪರಿಶೀಲಿಸಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ವೇಳೆ ಡ್ರಮ್‌ನಲ್ಲಿ ದೇಹದ ಮೇಲ್ಬಾಗವು ಹಾಗೇ ಇದ್ದು, ಕೈಗಳು ಮತ್ತು ಕಾಲುಗಳನ್ನು ನಿಖರವಾಗಿ ಕತ್ತರಿಸಲ್ಪಟ್ಟಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ಸಂಜೆ ಮತ್ತು ಮಧ್ಯರಾತ್ರಿಯ ನಡುವೆ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ಕುಟುಂಬ ಸದಸ್ಯರೊಂದಿಗೆ ತನಿಖೆ ನೆಡಸಿದ ನಂತರ ಸುಶೀಲಮ್ಮ ಕೆಆರ್ ಪುರಂನ ನಿಸರ್ಗ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಬೆಳಗ್ಗೆ ಸುಶೀಲಮ್ಮ ತಮ್ಮ ಮಗಳೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಹಾಗೂ ಸುಶೀಲಮ್ಮ ಮನೆಯವರಿಗೆ ತಿಳಿಸದೆ ಸ್ವಲ್ಪ ಹೊತ್ತು ಮನೆ ಬಿಟ್ಟು ನಂತರ ವಾಪಸ್ಸಾಗುವ ಅಭ್ಯಾಸ ಕೂಡ ಹೊಂದಿದ್ದರು. ಶನಿವಾರ ಅವರು ಕಣ್ಮರೆಯಾದಾಗ, ಅದೇ ರೀತಿ ಇರಬಹುದೆಂದು ಕುಟುಂಬಸ್ಥರು ಅಂದುಕೊಂಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮೃತ ಮಹಿಳೆ ಬಿಜೆಪಿ ಕಾರ್ಯಕರ್ತೆ ಎಂಬುದು ತನಿಖೆ ವೇಳೆ ತಿಳಿದುಬಂದಿದ್ದು, ಹತ್ಯೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ