-->

ಡಯಟ್ ಬಗ್ಗೆ ನಿಮಗೆಷ್ಟು ಗೊತ್ತು, ಪ್ಲೆಕ್ಸಿಟೇರಿಯನ್ ಡಯಟ್‌ ಅಂದರೆ ಏನು ಅದರ ಪ್ರಯೋಜನವೇನು?

ಡಯಟ್ ಬಗ್ಗೆ ನಿಮಗೆಷ್ಟು ಗೊತ್ತು, ಪ್ಲೆಕ್ಸಿಟೇರಿಯನ್ ಡಯಟ್‌ ಅಂದರೆ ಏನು ಅದರ ಪ್ರಯೋಜನವೇನು?

 
ಅರೆ ಸಸ್ಯಾಹಾರಿ ಡಯಟ್ ಅನ್ನು ಪ್ಲೆಕ್ಸಿಟೇರಿಯನ್ ಡಯಟ್ ಒಳಗೊಂಡಿರುತ್ತದೆ ಸಸ್ಯಾಧಾರಿತ ಆಹಾರ ಸೇವನೆ ಹೆಚ್ಚಿದ್ದು, ಕಡಿಮೆ ಅಥವಾ ಅಪರೂಪಕ್ಕೆ ಮಾಂಸ ಸೇವನೆಯನ್ನು ಒಳಗೊಂಡಿರುತ್ತದೆ. ಪ್ಲೆಕ್ಸಿಟೇರಿಯನ್ ಡಯಟ್‌ನಿಂದ ಹೃದಯ ರೋಗದ ಅಪಾಯ ಕಡಿಮೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

 ಅರೆ ಸಸ್ಯಹಾರಿ ಡಯಟ್ ಎಂದು ಕರೆಯಲಾಗುವ ಪ್ಲೆಕ್ಸಿಟೇರಿಯನ್‌ ಡಯಟ್‌ನಲ್ಲಿ  ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ತಿಳಿದಿದ್ದೆ  ತನ್ನ ನೂತನ ಜರ್ನಲ್ ಬಿಎಂಸಿ ನ್ಯೂಟ್ರಿಷನ್‌ನಲ್ಲಿ ಪ್ರಕಟಿಸಲಾಗಿದೆ. 
ಈ ಅಧ್ಯಯನದಲ್ಲಿ ಮಾಂಸಾಧಾರಿತ ಆಹಾರ ಸೇವನೆಗಿಂತ ಸಸ್ಯಾಧಾರಿತ ಆಹಾರ ಸೇವನೆ ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂಬುದನ್ನು ತೋರಿಸಲಾಗಿದೆ.


ಹೃದಯ ಆರೋಗ್ಯದ ಮೇಲೆ ಪ್ಲೆಕ್ಸಿಟೇರಿಯನ್ ಆಹಾರವೂ ಎಷ್ಟು ಪರಿಣಾಮಕಾರಿ ಎಂಬುದನ್ನು ಪತ್ತೆ ಮಾಡುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ 25 ರಿಂದ 45 ವರ್ಷದ 94 ಮಂದಿ ಮೇಲೆ ಅಧ್ಯಯನ ಕೈಗೊಳ್ಳಲಾಗಿದೆ. ಭಾಗಿದಾರರು ಅಧ್ಯಯನ ಆರಂಭವಾಗುವ ಒಂದು ವರ್ಷ ಮುಂಚೆ ವೆಗನ್ ಮತ್ತು ಸರ್ವಭಕ್ಷ ಅಥವಾ ಪ್ಲೆಕ್ಸಿಟೇರಿಯನ್ ಆಹಾರ ಪದ್ಧತಿಯನ್ನು ಪಾಲಿಸುತ್ತಿದ್ದರು. ಭಾಗಿದಾರರ ಹವ್ಯಾಸ ಮತ್ತು ಜೀವನಶೈಲಿಯ ಅಂಶವನ್ನು ಪ್ರಶ್ನಾವಳಿಗಳ ಮೂಲಕ ಮೌಲ್ಯಮಾಪನ ಮಾಡಲಾಗಿದೆ.

ದಿನವೊಂದಕ್ಕೆ ಭಾಗಿದಾರರೊಬ್ಬರು 50 ಗ್ರಾಂ ಮಾಂಸವನ್ನು ಸೇವಿಸಿದರೆ ಅವರನ್ನು ಪ್ಲೆಕ್ಸಿಟೇರಿಯನ್ ವರ್ಗಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಇನ್ನು 170 ಗ್ರಾಂ ಮತ್ತು ಅದಕ್ಕಿಂತ ಹೆಚ್ಚಿನ ಮಾಂಸ ಸೇವಿಸುವವರನ್ನು ಸರ್ವಭಕ್ಷಕ ವರ್ಗದಲ್ಲಿ ಗುರುತಿಸಲಾಗಿದೆ. ಇನ್ನು ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದವರನ್ನು ವೆಗಾನ್ ಎಂಬ ಮೂರನೇ ವರ್ಗದಲ್ಲಿ ಗುರುತಿಸಲಾಗಿದೆ.ಅಧ್ಯಯನದ ದಿನಗಳಲ್ಲಿ ಹೃದಯರಕ್ತನಾಳದ ಕಾಯಿಲೆಯ ಬಯೋಮಾರ್ಕ‌್ರನ ಮೌಲ್ಯಮಾಪನ ಮಾಡಲು ಭಾಗಿದಾರರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಹೆಚ್ಚುವರಿಯಾಗಿ ಸಂಶೋಧಕರು ಭಾಗಿದಾರರ ರಕ್ತದ ಒತ್ತಡ, ಬಿಎಂಐ ಮತ್ತು ಅಪಧಮನಿ ಬಿಗಿತನವನ್ನು ಕೂಡಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಪ್ಲೆಕ್ಸಿಟೇರಿಯನ್ ಮತ್ತು ವೆಗನ್ ಭಾಗಿದಾರರಲ್ಲಿ ರಕ್ತದ ಬಯೋಮಾರ್ಕ್ ವಿಶ್ಲೇಷಿಸಿದಾಗ ಸರ್ವಭಕ್ಷಕ ವರ್ಗದ ಭಾಗಿದಾರರಿಗಿಂತ ಉತ್ತಮ ಹೃದಯದ ಆರೋಗ್ಯ ಕಂಡು ಬಂದಿದೆ. ವಿಶೇಷವಾಗಿ ಅವರಲ್ಲಿ ಒಟ್ಟಾರೆ ಕೊಲೆಸ್ಟ್ರಾಲ್ ಮತ್ತು ಎಲ್‌ಡಿಎಲ್ ಮಟ್ಟ ಕಡಿಮೆಯಾಗಿದೆ.

ಸರ್ವಭಕ್ಷಕರಿಗೆ ಹೋಲಿಕೆ ಮಾಡಿದಾಗ ಪ್ಲೆಕ್ಸಿಟೇರಿಯನ್ ಮತ್ತು ವೆಗಾನ್ ವರ್ಗದವರಲ್ಲಿ ಕಡಿಮೆ ಉಪವಾಸ ಇನ್ಸುಲಿನ್ ಮಟ್ಟ ಕಂಡು ಬಂದಿದೆ. ಅಂತಿಮವಾಗಿ ಪ್ಲೆಕ್ಸಿಟೇರಿಯನ್ ಮತ್ತು ವೆಗಾನ್ ಭಾಗಿದಾರರಲ್ಲಿ ಹೃದಯ ಅಪಾಯದ ಅಂಶ, ರಕ್ತದ ಗ್ಲುಕೋಸ್ ಮಟ್ಟ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟ ಮತ್ತು ತೂಕಕ್ಕಿಂತಲೂ ಕಡಿಮೆ ಚಯಾಪಚಯ ಸಮಸ್ಯೆಯ ತೀವ್ರತೆ ಕಡಿಮೆ ಕಂಡು ಬಂದಿದೆ.

ಡಯಟ್ ಮಾಡುವುದು ಮುಖ್ಯವಲ್ಲ ಯಾವ ರೀತಿಯ ಡಯಟ್  ಮಾಡುತ್ತೇವೆ ಎಂಬುದು ಮುಖ್ಯವಾಗಿರುತ್ತದೆ

Ads on article

Advertise in articles 1

advertising articles 2

Advertise under the article