-->

ಅಮೇರಿಕಾದಲ್ಲಿ ದಂಪತಿ, ಅವಳಿ ಪುತ್ರರು ಮೃತದೇಹವಾಗಿ ಪತ್ತೆ

ಅಮೇರಿಕಾದಲ್ಲಿ ದಂಪತಿ, ಅವಳಿ ಪುತ್ರರು ಮೃತದೇಹವಾಗಿ ಪತ್ತೆ


ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾ ಸ್ಯಾನ್‌ಮಾಟಿಯೊ ಕೌಂಟಿಯ ಮನೆಯೊಂದರಲ್ಲಿ ಭಾರತ ಮೂಲದ ದಂಪತಿ ಹಾಗೂ ಅವಳಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

ಮೃತರನ್ನು ಕೇರಳ ಮೂಲದ ದಂಪತಿ ಆನಂದ್‌ ಸುಜಿತ್‌ ಹೆನ್ರಿ (42), ಅವರ ಪತ್ನಿ ಅಲೈಸ್ ಪ್ರಿಯಾಂಕಾ (40) ಹಾಗೂ ನಾಲ್ಕು ವರ್ಷದ ಅವಳಿ ಮಕ್ಕಳ ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ, ಕೊಲೆ ಪ್ರಕರಣವೋ ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆನಂದ್‌ ಸುಜಿತ್ ಹೆನ್ರಿ ಎರಡು ವರ್ಷಗಳ ಹಿಂದಷ್ಟೇ ಸ್ಯಾನ್‌ಮಾಟಿಯೊ ಕೌಂಟಿಯಲ್ಲಿ ಸುಮಾರು 17.50 ಕೋಟಿ ರೂ. ವೆಚ್ಚದಲ್ಲಿ ನಿವಾಸ ಖರೀದಿಸಿದ್ದರು. ಅಲ್ಲಿ ಪತ್ನಿ ಹಾಗೂ ಅವಳಿ ಪುತ್ರರೊಂದಿಗೆ ವಾಸವಾಗಿದ್ದರು. ಆನಂದ್ ಸುಜಿತ್ ಹೆನ್ರಿ ಹಾಗೂ ಅಲೈಸ್ ಪ್ರಿಯಾಂಕಾ ಮೃತದೇಹಗಳು ಶೌಚಾಲಯದಲ್ಲಿ ಪತ್ತೆಯಾಗಿದೆ. ಅಲ್ಲಿಯೇ ಪಿಸ್ತೂಲ್ ಮತ್ತು ಬುಲೆಟ್ ಗಳು ದೊರೆತಿವೆ. ಇಬ್ಬರ ಪುತ್ರರ ಮೃತದೇಹ ಮಲಗುವ ಕೋಣೆಯಲ್ಲಿ ದೊರೆತಿದೆ. ಮಕ್ಕಳ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಹೀಗಾಗಿ ಈ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ, ಕತ್ತು ಹಿಸುಕಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Ads on article

Advertise in articles 1

advertising articles 2

Advertise under the article