ಮಂಗಳೂರು: ಮೀನುಗಾರಿಕೆ ತೆರಳಿದ್ದ ಕರಾವಳಿಯ ಬೋಟುಗಳ ಮೇಲೆ ಸಮುದ್ರ ಮಧ್ಯೆಯೇ ತಮಿಳುನಾಡು ಹಾಗೂ ಕೇರಳದ ಮೀನುಗಾರರು ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ಕಳೆದೆರಡು ತಿಂಗಳಲ್ಲಿ ಮಂಗಳೂರಿನಿಂದ ಮೀನುಗಾರಿಕೆ ತೆರಳಿದ್ದ ಶೇ 50ರಷ್ಟು ಬೋಟುಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಮೀನುಗಾರರ ಮೇಲೆಯೂ ಹಲ್ಲೆ ನಡೆಸಿದ್ದಾರೆಂದು ಮಂಗಳೂರಿನ ಮೀನುಗಾರರು ಆರೋಪಿಸಿದ್ದಾರೆ.
ಕರಾವಳಿಯಲ್ಲಿ ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಬಳಿಕ ಆಳಸಮುದ್ರ ಮೀನುಗಾರಿಕೆ ತೆರಳಲಾಗುತ್ತದೆ. ಈ ವೇಳೆ ದಕ್ಷಿಣದತ್ತ ತೆರಳಿ, ಆಳಸಮುದ್ರದಲ್ಲಿ ಬಲೆ ಬೆಲೆಬಾಳುವ ರಿಬ್ಬನ್ ಫಿಶ್ ಮೀನುಗಾರಿಕೆ ಮಾಡಲಾಗಿದೆ. ತಮಿಳುನಾಡಿನ ರಾಮೇಶ್ವರಂವರೆಗೂ ಮೀನುಗಾರಿಕೆಗೆ ತೆರಳಲಾಗುತ್ತದೆ. ಆದರೆ ಈ ಬಾರಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿರುವ ರಾಜ್ಯದ ಮೀನುಗಾರರನ್ನೇ ಟಾರ್ಗೆಟ್ ಮಾಡಿ, ತಮಿಳು ಮತ್ತು ಕೇರಳದ ಮೀನುಗಾರರಿಗೆ ಹಲ್ಲೆ ನಡೆಸಲಾಗುತ್ತಿದೆ.
ಕರ್ನಾಟಕದ ಬೋಟುಗಳನ್ನು ಸುತ್ತುವರೆದುವರೆದು ಹಲ್ಲೆ ನಡೆಸಿ ಬೋಟಿಗೆ ಹಾನಿ ಎಸಗಲಾಗಿದೆ. ಘಟನೆಯ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಮಂಗಳೂರಿನ ಮೀನುಗಾರರು ಅದನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಅಲ್ಲದೆ ಮೀನುಗಾರಿಕಾ ಇಲಾಖೆಯ ಗಮನಕ್ಕೂ ತಂದಿದ್ದಾರೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಸಂದರ್ಭ ಪ್ರತಿಬಾರಿಯು ಇಂತಹ ಘಟನೆಗಳಾಗುತ್ತಿದೆ. ವಿಡಿಯೋದಲ್ಲಿ ರಾಜ್ಯದ ಮೀನುಗಾರಿಕಾ ಬೋಟನ್ನು ವಶಕ್ಕೆ ಪಡೆದು ಅದರಲ್ಲಿದ್ದ ಬಲೆ ಇನ್ನಿತರ ಪನಿತರ ಪರಿಕರಗಳನ್ನು ಸಮುದ್ರಕ್ಕೆ ಎಸೆಯುವ ದೃಶ್ಯ ಕಂಡು ಬಂದಿದೆ.