-->

ರಟ್ಟಿನ ಬಾಕ್ಸ್ ನಲ್ಲಿ ಮಲಗಿ ದಿನ ಕಳೆದಿದ್ದ Infosys ಸಂಸ್ಥಾಪಕ ನಾರಾಯಣ ಮೂರ್ತಿ

ರಟ್ಟಿನ ಬಾಕ್ಸ್ ನಲ್ಲಿ ಮಲಗಿ ದಿನ ಕಳೆದಿದ್ದ Infosys ಸಂಸ್ಥಾಪಕ ನಾರಾಯಣ ಮೂರ್ತಿಹೊಸದಿಲ್ಲಿ: ಅಮೆರಿಕದ ಉದ್ಯಮಿ ತಮ್ಮ 4 ಬೆಡ್‌ರೂಮ್‌ಗಳ ಐಷಾರಾಮಿ ಮನೆ ಯಲ್ಲಿ ಕಿಟಕಿ, ಬೆಳಕಿಲ್ಲದ, ರಟ್ಟಿನ ಬಾಕ್ಸ್ ಗಳಿಂದ ತುಂಬಿದ್ದ ಸ್ಟೋರ್ ರೂಮ್‌ನಲ್ಲಿನ ಒಂದು ಬಾಕ್ಸ್ ನಲ್ಲಿ ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವ ರನ್ನು ಮಲಗುವಂತೆ ಮಾಡಿ ದ್ದರು ಎಂಬ ಅಚ್ಚರಿಯ ವಿಷಯ ಈಗ ಬೆಳಕಿಗೆ ಬಂದಿದೆ.


 ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಬದುಕಿನ ಕುರಿತು ಭಾರತೀಯ ಮೂಲದ ಅಮೆ ರಿಕ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾ ಕರುಣಿ ಅವರು ಬರೆದ ಆತ್ಮಚರಿತ್ರೆ ಆ್ಯನ್ ಅನ್ ಕಾಮನ್ ಲವ್- ದಿ ಅರ್ಲಿ ಲೈಫ್ ಸುಧಾ ಆ್ಯಂಡ್ ನಾರಾಯಣ ಮೂರ್ತಿ ಎಂಬ ಪುಸ್ತಕದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. 


ನಾರಾಯಣಮೂರ್ತಿ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನ  ಗಳಲ್ಲಿ ತಮ್ಮ ಕಂಪೆನಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಈ ಘಟನೆ ನಡೆದಿತ್ತು.


 ನ್ಯೂಯಾರ್ಕ್‌ ಡಾಟಾ ಬೇಸಿಕ್ಸ್ ಕಾರ್ಪೋರೇಶನ್ ಕಂಪೆನಿಯ ಡಾನ್ ಲಿಲೆಸ್ ಎಂಬ ಉದ್ಯಮಿ ಮೂರ್ತಿ ಅವರಿಗೆ ಹಾಗೂ ಇನ್ಫೋಸಿಸ್‌ ಸಿಬಂದಿಗೆ ಸಮಯಕ್ಕೆ ಸರಿಯಾಗಿ ಸಹಾಯಕ್ಕೆ ಒದಗಿ ಬರುತ್ತಿರಲಿಲ್ಲ ಹಾಗೂ ಆಗಾಗ ಮೂರ್ತಿ ಅವರ ಸಿಟ್ಟಿಗೆ ಕಾರಣ ವಾಗುತ್ತಿದ್ದರು. ಆದರೆ ತಮ್ಮ ಕಂಪೆನಿಗೆ ಸಂಪನ್ಮೂಲಗಳನ್ನು ಪಡೆಯಲು ಮೂರ್ತಿ ಅವರು ಇದನ್ನೆಲ್ಲ ಸಹಿಸಿಕೊಳ್ಳುತ್ತಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article