-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಮಾಸ್ಟರ್ ಚೆಫ್ ಇಂಡಿಯಾ ರಿಯಾಲಿಟಿ ಶೋನ ವಿನ್ನರ್ ಆದ ಕುಡ್ಲದ ಯುವಕ - ಮೊಹಮ್ಮದ್ ಆಶಿಕ್ ಸಾಧನೆಗೆ ಮಂಗಳೂರಿಗರು ಫಿದಾ

ಮಂಗಳೂರು: ಮಾಸ್ಟರ್ ಚೆಫ್ ಇಂಡಿಯಾ ರಿಯಾಲಿಟಿ ಶೋನ ವಿನ್ನರ್ ಆದ ಕುಡ್ಲದ ಯುವಕ - ಮೊಹಮ್ಮದ್ ಆಶಿಕ್ ಸಾಧನೆಗೆ ಮಂಗಳೂರಿಗರು ಫಿದಾ


ಮಂಗಳೂರು: ಸೋನಿ ಟಿವಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪ್ರಖ್ಯಾತ ರಿಯಾಲಿಟಿ ಶೋ ಮಾಸ್ಟರ್ ಚೆಫ್ ಇಂಡಿಯಾ ಶೋನಲ್ಲಿ ಮಂಗಳೂರಿನ 24 ವರ್ಷದ ಯುವಕ ಮೊಹಮ್ಮದ್ ಆಶಿಕ್ ಗೆದ್ದು ಕಿರೀಟ ತನ್ನದಾಗಿಸಿಕೊಂಡಿದ್ದಾರೆ.

ಅಕ್ಟೋಬ‌ರ್ 16ರಿಂದ ನಡೆಯುತ್ತಿದ್ದ ರಿಯಾಲಿಟಿ ಶೋನಲ್ಲಿ ಇಡೀ ದೇಶದ ವಿಭಿನ್ನ ಮಾದರಿಯ ದೇಸಿ ಅಡುಗೆಗಳ ಮಾದರಿಗಳನ್ನು ತೋರಿಸಬೇಕಿತ್ತು. ಇದು ನಿಜವಾಗಿಯೂ ಸ್ಪರ್ಧಾಲುಳಿಗೆ ಸವಾಲೆನಿಸುವ ಪಂದ್ಯಾಟವಾಗಿತ್ತು. ಜೊತೆಗೆ ನಿಗದಿತ ಸಮಯದೊಳಗೆ ಅಡುಗೆಯ ಮಾದರಿಗಳನ್ನು ಸಿದ್ಧಪಡಿಸಬೇಕಿತ್ತು. ಆದರೆ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಯುವಕನೋರ್ವ ವಿನ್ನರ್ ಆಗಿ ಹೊರಹೊಮ್ಮಿದ್ದಾನೆ. ಈ ಮೂಲಕ ಮಂಗಳೂರಿನ ಮೊಹಮ್ಮದ್ ಆಶಿಕ್ ಅಪರೂಪದ ದಾಖಲೆಯನ್ನು ಸೃಷ್ಟಿಸಿ ಇಡೀ ದೇಶದ ಗಮನವನ್ನು ಸೆಳೆದಿದ್ದಾರೆ.

ಮೊಹಮ್ಮದ್ ಆಶಿಕ್ ಗೆ ಆರಂಭದಲ್ಲಿ ಹೊಟೇಲ್ ಮ್ಯಾನೇಜೆಂಟ್ ನಲ್ಲಿ ಗುರುತರ ಸಾಧನೆ ಮಾಡಲು ಹಣಕಾಸು ತೊಂದರೆ ಎದುರಾಗಿತ್ತು. ಆದರೆ ಅಷ್ಟಕ್ಕೇ ಹಿಮ್ಮೆಟ್ಟದ ಇವರು ತಮ್ಮದೇ ಆದ ವಿಶೇಷ ರೆಸಿಪಿಯುಳ್ಳ ಕುಲ್ಕಿ ಹಬ್ ಎನ್ನುವ ಜ್ಯೂಸ್ ಶಾಪ್ ಅನ್ನು ಮಂಗಳೂರಿನಲ್ಲಿ ಆರಂಭಿಸಿದ್ದರು. ಸೋನಿ ಟಿವಿಯಲ್ಲಿ ಈ ಹಿಂದೆ ನಡೆದಿದ್ದ ರಿಯಾಲಿಟಿ ಶೋನಲ್ಲಿ ಮೊಹಮ್ಮದ್ ಆಶಿಕ್ ಸ್ಪರ್ಧಿಸಿದ್ದರೂ ಆದರೆ ಜಯದ ಹಾರವನ್ನು ಕೊರಳಿಗೆ ಹಾಕಿಕೊಳ್ಳಲು ಸಾಧ್ಯವಾಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಗುರುತರ ಸಾಧನೆ ಮಾಡಿದ್ದಲ್ಲದೆ, ಮಾಸ್ಟರ್ ಚೆಫ್ ಕಿರೀಟವನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಮೊಹಮ್ಮದ್ ಆಶಿಕ್ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article