ಯಡಿಯೂರಪ್ಪ ಶಕುನಿ: BJP ನಾಯಕನ ವ್ಯಂಗ್ಯ!
Tuesday, December 26, 2023
ವಿಜಯಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಕುನಿ ಇದ್ದಂತೆ. ಅವರು ಏನು ಹೇಳುತ್ತಾರೋ ಅದು ಉಲ್ಟಾ ಆಗಿರುತ್ತದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದರೂ ಏನೂ ಅಗದು ಎಂಬುದನ್ನು ಅರಿತು ಈಗ 'ಯತ್ನಾಳ್ ವಿರುದ್ಧ ವರಿಷ್ಠರಿಗೆ ದೂರು ನೀಡಿಲ್ಲ' ಎನ್ನುತ್ತಿದ್ದಾರೆ.
ಈ ಹಿಂದೆ ಶೋಭಾ, ಕರಂದ್ಲಾಜೆ ಪಕ್ಷದ ರಾಜ್ಯಾಧ್ಯಕ್ಷರಾಗಲು, ಯತ್ನಾಳ್ ವಿಪಕ್ಷದ ನಾಯಕರಾಗಲು ನನ್ನ ಅಭ್ಯಂತರ ಇಲ್ಲ ಎಂದು ಹೇಳಿದ್ದ ವಿಜಯೇಂದ್ರ, ಬಳಿಕ ವರಿಷ್ಠ ರಿಂದ ಎಲ್ಲವನ್ನೂ ಪ್ಯಾಕ್ ಮಾಡಿ ಕೊಂಡು ಬಂದಿದ್ದರು ಎಂದರು.