-->
1000938341
ಬಾಡಿಗೆ ಫ್ಲ್ಯಾಟ್ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಬಾಡಿಗೆ ಫ್ಲ್ಯಾಟ್ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಹೊಸದಿಲ್ಲಿ: ಬಾಡಿಗೆ ಫ್ಲ್ಯಾಟ್ ಹುಡುಕುತ್ತಿದ್ದ 30ರ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಉತ್ತರ ದೆಹಲಿಯ ಬುರಾರಿಯಲ್ಲಿ ನಡೆದಿದೆ. ಆರೋಪಿಗಳ ಪೈಕಿ ಒಬ್ಬ ರಿಯಲ್ ಎಸ್ಟೇಟ್ ಡೀಲರ್ ಎನ್ನಲಾಗಿದೆ.

ಈ ಘಟನೆ ರವಿವಾರ ನಡೆದಿದೆ. ಖಾಲಿ ಅಪಾರ್ಟೆಂಟ್ ಗೆ ಮಹಿಳೆಯನ್ನು ಕರೆದೊಯ್ದ ಈ ಇಬ್ಬರು ಅಮಲು ಪದಾರ್ಥ ಬೆರೆಸಿದ ನೀರು ಕುಡಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ.

ಬಾಡಿಗೆಗೆ ಫ್ಲಾಟ್ ಹುಡುಕುತ್ತಿದ್ದ ತನ್ನೊಂದಿಗೆ ಜಿತೇಂದ್ರ ಚೌಧರಿ ಎಂಬ ಆಸ್ತಿ ಡೀಲರ್ ಜತೆ ಸಂಪರ್ಕದಲ್ಲಿದ್ದ.. ಬಾಡಿಗೆಗೆ ಫ್ಲ್ಯಾಟ್ ಲಭ್ಯವಿದೆ ಎಂದು ನಂಬಿಸಿ, ಆರೋಪಿ ಜಿತೇಂದ್ರ ಚೌಧರಿ ಮತ್ತು ಆತನ ಸಹಚರ, ಮಹಿಳೆಯನ್ನು ಖಾಲಿ ಫ್ಲಾಟ್ ಗೆ ಕರೆದೊಯ್ದಿದ್ದಾರೆ. ಅಲ್ಲಿ ಮಹಿಳೆಗೆ ಅಮಲು ಪದಾರ್ಥ ಬೆರೆಸಿದ ನೀರು ಕುಡಿಸಿದ್ದಾರೆ.

ಅಮಲು ಪದಾರ್ಥ ಬೆರೆಸಿದ ನೀರು ಕುಡಿದ ಮಹಿಳೆ ಪ್ರಜ್ಞೆ ತಪ್ಪಿದ್ದಾರೆ. ಆಗ ಆಕೆಯ ಮೇಲೆ ಇಬ್ಬರೂ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಬುರಾರಿ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article