ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತೆ ಮೂವರ ಸುಳಿವು ನೀಡಿದವರಿಗೆ ತಲಾ 2ಲಕ್ಷ ಬಹುಮಾನ ಘೋಷಿಸಿದ ಎನ್ಐಎ

ಮಂಗಳೂರು: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಸುಳಿವಿಗೆ ಎನ್ಐಎ ಈಗಾಗಲೇ ವಾಂಟೆಡ್‌ ನೋಟಿಸ್ ಜಾರಿ ಮಾಡಿತ್ತು. ಇದೀಗ ಎನ್ಐಎ ಮತ್ತೆ ಮೂವರ ಮೇಲೆ ರಿವಾರ್ಡ್ ವಾಂಟೆಡ್ ನೋಟೀಸ್ ಜಾರಿ ಮಾಡಿದೆ.

ಈ ಮೂವರು ಆರೋಪಿಗಳ ಸುಳಿವು ನೀಡಿದವರಿಗೆ ಎನ್ಐಎ ಎರಡು ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ ಆರೋಪಿ ನಂ 23 ನೌಷಾದ್ ನ ಸುಳಿವಿಗೆ ಎನ್ಐಎ 2 ಲಕ್ಷ ಬಹುಮಾನ ಘೋಷಣೆ ಮಾಡಿದೆ. ಅದೇ ರೀತಿ‌ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಚೌಡ್ಲಿ ಕಾನ್ವೆಂಟ್ ರೋಡ್ ನಿವಾಸಿ, ಆರೋಪಿ ನಂ 22 ಅಬ್ದುಲ್ ನಾಸೀರ್ ಹಾಗೂ ಕೊಡಗು ಸೋಮವಾರಪೇಟೆ ತಾಲೂಕಿನ ಕಲಕಂದೂರ್ ಗ್ರಾಮದ ಆರೋಪಿ ನಂ 24 ಅಬ್ದುಲ್ ರೆಹಮಾನ್ ಸುಳಿವು ನೀಡಿದವರಿಗೂ 2 ಲಕ್ಷ ಘೋಷಿಸಿದೆ. 

ಈ ಮೂವರು ಕೂಡ ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರಾಗಿದ್ದರು.

BREAKING NEWS
Loading latest news...
Join our WhatsApp Channel Powered By : Online Pudu