-->
MANGALORE-  ಮೋತಿಮಹಲ್  ಹೋಟೆಲ್ ನ ಈಜುಕೊಳದಲ್ಲಿ  ಬ್ಯಾಂಕ್ ಮ್ಯಾನೆಜರ್ ಸಾವು

MANGALORE- ಮೋತಿಮಹಲ್ ಹೋಟೆಲ್ ನ ಈಜುಕೊಳದಲ್ಲಿ ಬ್ಯಾಂಕ್ ಮ್ಯಾನೆಜರ್ ಸಾವು


ಮಂಗಳೂರು:  ಮಂಗಳೂರಿನ ಪ್ರತಿಷ್ಠಿತ  ಮೋತಿ ಮಹಲ್ ಹೊಟೇಲ್ ನ ಈಜುಕೊಳದಲ್ಲಿ  ಕೇರಳದ ಯೂನಿಯನ್ ಬ್ಯಾಂಕ್ ಮ್ಯಾನೆಜರ್ ರವರ ಮೃತದೇಹ ಪತ್ತೆಯಾಗಿದೆ.

ಕೇರಳದಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿ ಯಾಗಿರುವ
ಗೋಪು ಆರ್ ನಾಯರ್  ಮೃತಪಟ್ಟವರು. ಇವರು ಕೇರಳದ ತಿರುವನಂತಪುರಂ ಜಿಲ್ಲೆಯ ನಿವಾಸಿಯಾಗಿದ್ದಾರೆ.
ಇವರು ನಿನ್ನೆ ಹೋಟೆಲ್ ನ ಈಜುಕೊಳದಲ್ಲಿ  ಮುಳುಗಿ‌  ಮೃತ ಪಟ್ಟಿದ್ದಾರೆ. ಇವರು ನಿನ್ನೆ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ವಾಸ್ತವ್ಯವಿದ್ದರು. ನಿನ್ನೆ ಸಂಜೆ 4 ಗಂಟೆಗೆ ಹೊಟೇಲ್ ರೂಮ್ ನಿಂದ  ಬ್ಯಾಂಕ್ ಅಧಿಕಾರಿ ಹೊರ ಹೋಗಿದ್ದರು.

ಈಜುಕೊಳ ( ಸ್ವಿಮ್ಮಿಂಗ್ ಪೂಲ್ ) ದಿಂದ ಮೃತದೇಹವನ್ನು  ಇಂದು ಮುಳುಗು ತಜ್ಞರು  ಹೊರತೆಗೆದಿದ್ದಾರೆ. ಗೋಪು ಆರ್ ನಾಯರ್ ಮೃತದೇಹ ಹನ್ನೊಂದು ಅಡಿ ಆಳದಲ್ಲಿತ್ತು. ಈಜುತ್ತಿರುವಾಗ ಮೇಲೆ ಬರಲು ಸಾಧ್ಯವಾಗದೆ ಇವರು ಮುಳುಗಿ ಸಾವನ್ನಪ್ಪಿದ್ದಾರೆ.

ಇವರು ಹೊಟೇಲ್ ರೂಂನಲ್ಲಿ ಮದ್ಯ ಸೇವಿಸಿ ಸ್ವಿಮ್ಮಿಂಗ್ ಫೂಲ್ ಗೆ ಇಳಿದಿರುವ ಬಗ್ಗೆ  ಶಂಕೆ ವ್ಯಕ್ತವಾಗಿದೆ. ಇವರ ಹೋಟೆಲ್ ರೂಮ್ ನಲ್ಲಿ ಖಾಲಿಯಾದ ಮದ್ಯ ಬಾಟಲಿ, ಆಹಾರ  ಪತ್ತೆಯಾಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article