ಗೂಗಲ್ ನಲ್ಲಿ ನಂಬರ್ ಹುಡುಕುವ ಮುನ್ನ ಎಚ್ಚರ- ಬಂಟ್ವಾಳ ದಲ್ಲಿ ಮಹಿಳೆಯೊಬ್ಬರು ಕಳೆದುಕೊಂಡರು 63 ಸಾವಿರ!
Saturday, September 2, 2023
ಮಂಗಳೂರು: ಗೂಗಲ್ ನಲ್ಲಿ ನಂಬರ್ ಹುಡುಕಿ ಕರೆ ಮಾಡುವ ಮುನ್ನ ಎಚ್ಚರ ವಹಿಸುವುದು ಅತೀ ಅವಶ್ಯ. ಇದೇ ರೀತಿ ಕರೆ ಮಾಡಿ ಬಂಟ್ವಾಳ ದ ಮಹಿಳೆಯೊಬ್ಬರು 63 ಸಾವಿರ ಕಳೆದುಕೊಂಡಿದ್ದಾರೆ.
ಆನ್ ಲೈನ್ ಮೂಲಕ ಖರೀದಿಸಿದ ಸಾಮಾಗ್ರಿ ಸರಿ ಇಲ್ಲ ಎಂದು ಮಹಿಳೆ ಸಂಸ್ಥೆ ನಂಬರ್ ನ್ನು ಗೂಗಲ್ ನಲ್ಲಿ ಹುಡುಕಿ ಕರೆ ಮಾಡಿದ್ದರು. ಇದರ ಪರಿಣಾಮ ವ್ಯಕ್ತಿಯೊಬ್ಬರು ರೂ 63 ಸಾವಿರ ಕಳೆದುಕೊಂಡಿದ್ದಾರೆ
ಮಹಿಳೆಯೊಬ್ಬರು ಜುಲೈ 18 ರಂದು ಆನ್ ಲೈನ್ ಮೂಲಕ ವಸ್ತುವೊಂದನ್ನು ಬುಕ್ ಮಾಡಿದ್ದರು. ಅದರಂತೆ
ಜುಲೈ 26 ರಂದು ಆನ್ ಲೈನ್ ಮೂಲಕ ವಸ್ತು ಬಂದಿತ್ತು. ಆದರೆ ಬಂದ ವಸ್ತು ಸರಿಯಿರದ ಹಿನ್ನೆಲೆ ಸಂಬಂಧಪಟ್ಟ ಸಂಸ್ಥೆಗೆ ವಿಚಾರಿಸುವ ಸಲುವಾಗಿ ಸಂಸ್ಥೆಯ ಸಂಪರ್ಕ ಸಂಖ್ಯೆಯನ್ನು ಗೂಗಲ್ ಮೂಲಕ ಪಡೆದು ಕರೆ ಮಾಡಿದ್ದಾರೆ. ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ಸೂಚಿಸಿದಂತೆ ಮಹಿಳೆಯ ಬ್ಯಾಂಕ್ ಖಾತೆ ವಿವರ, ಎ.ಟಿ.ಎಮ್. ಕಾರ್ಡ್ ನ ವಿವರಗಳನ್ನು ನೀಡಿದ್ದಾರೆ. ಆ ಬಳಿಕ ಮಹಿಳೆಯ ಬ್ಯಾಂಕ್ ಖಾತೆಯಿಂದ 63,000/- ರೂ ಹಣವು ಬೇರೆ ಯಾವುದೋ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ . ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.