-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ರೈಫಲ್ ನೊಂದಿಗೆ ದೇವಸ್ಥಾನ ಪ್ರವೇಶಿಸಿದ ಭಯೋತ್ಪಾದಕನಿಗೆ ಕಪಾಳಮೋಕ್ಷ - ಪೊಲೀಸರು ಹೇಳಿದ್ದೇನು?

ರೈಫಲ್ ನೊಂದಿಗೆ ದೇವಸ್ಥಾನ ಪ್ರವೇಶಿಸಿದ ಭಯೋತ್ಪಾದಕನಿಗೆ ಕಪಾಳಮೋಕ್ಷ - ಪೊಲೀಸರು ಹೇಳಿದ್ದೇನು?

ಮುಂಬೈ: ಸಶಸ್ತ್ರ ಹಿಡಿದುಕೊಂಡು ಭಯೋತ್ಪಾದಕನೊಬ್ಬ ಮಹಾರಾಷ್ಟ್ರದ ಧೂಲ್ ಎಂಬಲ್ಲಿ ಕಿಕ್ಕಿರಿದು ಜನರಿಂದ ತುಂಬಿದ್ದ ದೇವಸ್ಥಾನವನ್ನು ಪ್ರವೇಶಿಸಿದ್ದಾನೆ. ಇದರಿಂದ ಎಲ್ಲರೂ ಭಯಭೀತರಾಗಿದ್ದಾರೆ‌. ಆದರೆ ಓರ್ವ ಮಾತ್ರ ಧೈರ್ಯಮಾಡಿ ನೇರವಾಗಿ ಬಂದೂಕುಧಾರಿ ತೆರಳಿ ಕಪಾಳಮೋಕ್ಷ ಮಾಡಿದ್ದಾನೆ. ಹಾಗೆ ತೆರಳುವಾಗ ಆ ವ್ಯಕ್ತಿ, ದೇವಸ್ಥಾನದಲ್ಲಿ ಭಯೋತ್ಪಾದಕನಿಗೇನು ಕೆಲಸ? ಎಂದು ಕೇಳುತ್ತಾ ತೆರಳಿದ್ದರು ಎನ್ನಲಾಗಿದೆ. 

ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದವನನ್ನು ಪ್ರಶಂತ್ ಕುಲ್ಕರ್ಣಿ ( 35 ) ಎಂದು ಗುರುತಿಸಲಾಗಿದೆ. ಆದರೆ “ಭಯೋತ್ಪಾದಕನ” ಮುಖದ ಮೇಲೆ ಬಿಗಿಯಾದ ಹೊಡೆತ ಬಿದ್ದರೂ ಕೆಲವೇ ನಿಮಿಷಗಳ ಸನ್ನಿವೇಶ ತಿಳಿ ಹಾಸ್ಯವಾಗಿ ಬದಲಾಗಿದೆ ಎಂದು ತಿಳಿದು ಬಂದಿದೆ.

ಓರ್ವನು, ತನ್ನ ಕೈಯಲ್ಲಿ ರೈಫಲ್ ಹಿಡಿದುಕೊಂಡು ಮತ್ತು  ಮುಖವನ್ನು ಮುಚ್ಚಿ ಕಪ್ಪು ಬಟ್ಟೆಯನ್ನು ಇಟ್ಟುಕೊಂಡು ಜನರಿಂದ ಕಿಕ್ಕಿರಿದಿದ್ದ ಸ್ವಾಮಿನಾರಾಯಣ ದೇವಾಲಯಕ್ಕೆ ಪ್ರವೇಶಿಸಿದ್ದಾನೆ. ಇದರಿಂದಾಗಿ ಮಹಾರಾಷ್ಟ್ರದ ಧೂಲ್ ನಗರದ ಈ ದೇವಸ್ಥಾನದೊಳಗಿದ್ದ ಜನರು ಒಂದು ಕ್ಷಣಕ್ಕೆ ಆಘಾತಕ್ಕೊಳಗಾಗಿದ್ದಾರೆ. 

ತಕ್ಷಣವೇ ಅಲ್ಲಿಗೆ ಪೊಲೀಸರು ಬಂದು ಶಾಕ್​ ನೀಡಿದರು. ಆದಾಗ್ಯೂ, ಸ್ವಲ್ಪ ಸಮಯದ ಬಳಿಕ, ಪೊಲೀಸರು ಸಾರ್ವಜನಿಕರಿಗೆ ಇದು ನಿಜವಾದ ಭಯೋತ್ಪಾದಕ ಪರಿಸ್ಥಿತಿ ಅಲ್ಲ, ಆದರೆ ಅವರು ನಡೆಸಿದ ಮೋಕ್ ಡ್ರಿಲ್ ಎಂದು ಮಾಹಿತಿ ನೀಡಿದರು. ಅಂತಹ ಸಂದರ್ಭಗಳಲ್ಲಿ ನಾಗರಿಕರು ಯಾವ ರೀತಿ ವರ್ತಿಸುತ್ತಾರೆ ಎನ್ನುವುದನ್ನು ಗಮನಿಸುವುದು ಈ ಡ್ರಿಲ್​ನ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.

ಇದು ಪೊಲೀಸ್ ಡ್ರಿಲ್ ಎಂದು ತಿಳಿದ ಬಳಿಕ, ಭಯೋತ್ಪಾದಕನಾಗಿ ಪೋಸ್ ನೀಡಿದ್ದ ವ್ಯಕ್ತಿ ಒಬ್ಬ ಪೋಲೀಸ್ ಎಂಬುದು ಗೊತ್ತಾದ ಬಳಿಕ, ಕಪಾಳಮೋಕ್ಷ ಮಾಡಿದ್ದವನ ಕೋಪ ಶಮನವಾಗಿದೆ. 

Ads on article

Advertise in articles 1

advertising articles 2

Advertise under the article

ಸುರ