-->
1000938341
ಮಹೀಂದ್ರಾ ಸಕ್ಷಮ್ ಸ್ಕಾಲರ್‌ಶಿಪ್‌: ಚಾಲಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ

ಮಹೀಂದ್ರಾ ಸಕ್ಷಮ್ ಸ್ಕಾಲರ್‌ಶಿಪ್‌: ಚಾಲಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ

ಮಹೀಂದ್ರಾ ಸಕ್ಷಮ್ ಸ್ಕಾಲರ್‌ಶಿಪ್‌: ಚಾಲಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ

ಕರ್ನಾಟಕ ಸಹಿತ ದಕ್ಷಿಣ ಭಾರತದ ಲಘು ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಸಕ್ಷಮ್ ಸ್ಕಾಲರ್‌ಶಿಪ್‌ ಯೋಜನೆ ರೂಪಿಸಲಾಗಿದೆ.ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಕ್ಕೆ ಸೇರಿದ ಚಾಲಕರ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ.ಪರವಾನಿಗೆ ಹೊಂದಿರುವ ಎಲ್ಲ ಲಘು ವಾಹನಗಳ ಚಾಲಕರ ಮಕ್ಕಳಿಗೆ ಆರ್ಥಿಕವಾಗಿ ಬೆಂಬಲ ನೀಡುವುದಕ್ಕಾಗಿ ಮಹೀಂದ್ರಾ ಕಂಪೆನಿ ಈ ಸ್ಕಾಲರ್‌ಶಿಪ್ ಯೋಜನೆಯನ್ನು ಜಾರಿಗೆ ತಂದಿದೆ.

ಟ್ಯಾಕ್ಸಿ, ಜೀಪ್, ಕಾರು, ಪಿಕ್‌ಅಪ್, ಮ್ಯಾಜಿಕ್, ಡೆಲಿವರಿ ವ್ಯಾನ್‌ ಮತ್ತು ಸ್ಕೂಲ್ ವ್ಯಾನ್‌ ಇತ್ಯಾದಿ ಲಘು ಮೋಟಾರು ವಾಹನದ ಲೈಸನ್ಸ್‌ ಹೊಂದಿರುವ ಚಾಲಕರು ಈ ಯೋಜನೆಯಲ್ಲಿ ತಮ್ಮ ಮಕ್ಕಳ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.


ಅರ್ಹತೆ: ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿರಬೇಕು.ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ಹಂತದ ವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಬಹುದು.9 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ತಮ್ಮ ಹಿಂದಿನ ವರ್ಷದ ತರಗತಿಯಲ್ಲಿ ಶೇ. 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.


ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 3 ಲಕ್ಷ ರೂ.ಗಳನ್ನು ಮೀರಿರಬಾರದು.


ಪೋಷಕರಲ್ಲಿ ಒಬ್ಬರು ಚಾಲಕರಾಗಿರಬೇಕು ಮತ್ತು ಚಾಲನಾ ಪರವಾನಗಿ ಹೊಂದಿರಬೇಕು.

ಆರ್ಥಿಕ ನೆರವು: ವರ್ಷಕ್ಕೆ 5 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳ ವರೆಗೆ ವಿದ್ಯಾರ್ಥಿ ವೇತನ ಲಭ್ಯವಾಗಲಿದೆ.


ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ: www.b4s.in/praja/SKSPS

ಆಥವಾ ಈ ಲಿಂಕ್‌ ಕ್ಲಿಕ್ ಮಾಡಬಹುದು.

https://www.buddy4study.com/page/saksham-scholarship-program-for-drivers-children?ref=FeaturedRightBlock


Ads on article

Advertise in articles 1

advertising articles 2

Advertise under the article