ತಂದೆಗೆ ಉಪದ್ರ ಕೊಡಬೇಡಿ, ಮನೆಯಲ್ಲಿ ನೆಮ್ಮದಿಯ ಜೀವನ ಮಾಡಲು ಅವಕಾಶ ಮಾಡಿ: 'ಚೈತ್ರಾ ಕುಂದಾಪುರ' ಅವರಿಗೆ ಎಸಿ ಕೋರ್ಟ್ ಆದೇಶ
ತನ್ನ ತಂದೆಗೆ ಯಾವುದೇ ರೀತಿಯ ಮಾನಸಿಕ, ದೈಹಿಕ ಉಪದ್ರವ ಕೊಡಬೇಡಿ, ಅವರಿಗೆ ಅವರ ಮನೆಯಲ್ಲಿ ನೆಮ್ಮದಿಯ ಜೀವನ ಮಾಡಲು ಅವಕಾಶ ಮಾಡಿ ಎಂದು ಚೈತ್ರಾ ಕುಂದಾಪುರ ಅವರಿಗೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ನಿರ್ದೇಶನ ನೀಡಿದೆ.
ಮಗಳು ಚೈತ್ರಾ ಅವರಿಂದ ನನಗೆ ಅನ್ಯಾಯವಾಗುತ್ತಿದೆ. ನನಗೆ ನನ್ನ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕೆಂದು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆ ಅನ್ವಯ ಪರಿಹಾರ ಕೋರಿ ನ್ಯಾಯ ಮಂಡಳಿಯಲ್ಲಿ ಬಾಲಕೃಷ್ಣ ನಾಯಕ್ ಪ್ರಕರಣ ದಾಖಲಿಸಿದ್ದರು.
ತಂದೆಗೆ ಯಾವುದೇ ರೀತಿ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರು ಮನೆಯಲ್ಲಿ ನಿರ್ಭೀತಿಯಿಂದ ಇರಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಸೂಕ್ತ ಮುಚ್ಚಳಿಕೆ ನೀಡಬೇಕು ಎಂದು ಇಲ್ಲಿನ ಎಸಿ ನ್ಯಾಯಾಲಯ ವಂಚನೆ ಪ್ರಕರಣದ ಆರೋಪಿಯಾಗಿರುವ ಚೈತ್ರಾ ಕುಂದಾಪುರ ಅವರಿಗೆ ಆದೇಶ ಮಾಡಿದೆ.