ನವಜಾತ ಶಿಶುವನ್ನು ಹೊಲದಲ್ಲಿ ಎಸೆದು ಪರಾರಿಯಾಗಲೆತ್ನಿಸಿದ ಮಹಾತಾಯಿ ಆಮೇಲೇನಾಯ್ತ ಗೊತ್ತೇ?


ಬಾಗಲಕೋಟೆ: ಹೆತ್ತತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಹೊಲದಲ್ಲಿ ಎಸೆದು ಪರಾರಿಯಾಗಲೆತ್ನಿಸಿದ ಪ್ರಕರಣವೊಂದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಈ ಕೃತ್ಯಕ್ಕೆ ಈಕೆಯ ಸಹೋದರನೇ ಸಾಥ್ ನೀಡಿದ್ದ.

ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಹೊಲದಲ್ಲಿ ಈ ಘಟನೆ ನಡೆದಿದೆ. ಸಂಗೊಂದಿ ಗ್ರಾಮದ ಬಾಣಂತಿ ಈ ಹೊಲದಲ್ಲಿ ನವಜಾತ ಶಿಶುವನ್ನು ಎಸೆದಿದ್ದಳು. ಈ ಸಂದರ್ಭ ಆಕೆಯ ಸಹೋದರ ಜತೆಗಿದ್ದನು. ಇವರಿಬ್ಬರೂ ಶಿಶುವನ್ನು ಎಸೆದು ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಿದ್ದ ಸಂದರ್ಭ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಇವರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ.

ದಾರಿ ಮಧ್ಯೆಯೇ ಈಕೆಗೆ ಹೆರಿಗೆಯಾಗಿದ್ದು, ಶಿಶುವನ್ನು ಹೊಲದಲ್ಲಿ ಬಿಸಾಕಿ ಹೊರಟಿದ್ದ ಇವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಬಾಣಂತಿ ಹಾಗೂ ಆಕೆಯ ಸಹೋದರನಿಗೆ ಕಪಾಳಮೋಕ್ಷ ಮೋಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದರು.

ಬಾಣಂತಿ ಹಾಗೂ ನವಜಾತ ಗಂಡು ಶಿಶುವನ್ನು ರಕ್ಷಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, 108 ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಇಬ್ಬರನ್ನೂ ದಾಖಲಿಸಿದ್ದಾರೆ. ಶಿಶುವನ್ನು ಎನ್​ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

BREAKING NEWS
Loading latest news...
Join our WhatsApp Channel Powered By : Online Pudu