-->
1000938341
ಮಂಗಳೂರು: ಯುವಕನ ಮೇಲೆ ತಲವಾರು ಝಳಸಿದ ಪುಂಡರು - 24 ಗಂಟೆಯೊಳಗೆ ಮೂವರು ಅರೆಸ್ಟ್

ಮಂಗಳೂರು: ಯುವಕನ ಮೇಲೆ ತಲವಾರು ಝಳಸಿದ ಪುಂಡರು - 24 ಗಂಟೆಯೊಳಗೆ ಮೂವರು ಅರೆಸ್ಟ್

ಮಂಗಳೂರು: ದಾರಿಯಲ್ಲಿ ನಡೆದುಕೊಂಡು ಹಳಗುತ್ತಿದ್ದ ಯುವಕನ ಮೇಲೆ ಸ್ಕೂಟರ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲವಾರು ಝಳಪಿಸಿದ್ದಾರೆ. ಇದೀಗ ಕಾವೂರು ಪೊಲೀಸರು ಕೃತ್ಯ ನಡೆದ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.

ನಗರದ ಪಂಜಿಮೊಗರು ಉರುಂದಾಡಿಗುಡ್ಡೆ ನಿವಾಸಿ ಚರಣ್ ರಾಜ್ (24) ಸುರತ್ಕಲ್ ‌ನ ಕುಳಾಯಿ ಹೊಸಬೆಟ್ಟು ನಿವಾಸಿ ಸುಮಂತ್ ಬರ್ಮನ್ (24) , ಕೋಡಿಜಾಲ್ ಸುಂಕದಕಟ್ಟೆ ಕಲ್ಲಬಾವಿಯ ಅವಿನಾಶ (24) ಬಂಧಿತ ಆರೋಪಿಗಳು.


ಆಗಸ್ಟ್ 20 ರಂದು ಕಾವೂರು ಠಾಣಾ ವ್ಯಾಪ್ತಿಯ ಎಮ್.ವಿ.ಶೆಟ್ಟಿ ಕಾಲೇಜು ರಸ್ತೆಯ ಬಳಿ ಯುವಕನೊಬ್ಬ ನಡೆದುಕೊಂಡು ಮನೆಗೆ ಹೋಗುತ್ತಿದ್ದ. ಈ ವೇಳೆ ಸ್ಕೂಟರ್ ನಲ್ಲಿ ಬಂದ ಈ ಮೂವರು ದುಷ್ಕರ್ಮಿಗಳು ಆತನನ್ನು ಅಡ್ಡಹಾಕಿ ತಡೆದು ತಲವಾರು ಝಳಪಿಸಿದ್ದಾರೆ. ತಕ್ಷಣ ಯುವಕ ತಪ್ಪಿಸಿಕೊಂಡಿದ್ದರಿಂದ ಆತನ ಮುಖಕ್ಕೆ ಗಾಯವಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾವೂರು ಪೊಲೀಸರು ಕಾರ್ಯಪ್ರವತ್ತರಾಗಿ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ   ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article