ರಾಹುಲ್ ಗಾಂಧಿ ಹೊಸ ಅವತಾರ..! ಎಲ್ಲರ ಹುಬ್ಬೇರಿಸಿತು ಕೈ ನಾಯಕನ ಈ ಕೃತ್ಯ!

ರಾಹುಲ್ ಗಾಂಧಿ ಹೊಸ ಅವತಾರ..! ಎಲ್ಲರ ಹುಬ್ಬೇರಿಸಿತು ಕೈ ನಾಯಕನ ಈ ಕೃತ್ಯ!



ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಪಾದಯಾತ್ರೆಯ ರಾಹುಲ್ ಗಾಂಧಿಯ ಜನಪ್ರಿಯತೆಯ ಗ್ರಾಫ್ ನಿಧಾನವಾಗಿ ಏರತೊಡಗಿದೆ. ನವದೆಹಲಿಯಿಂದ ಚಂಡೀಘಡಕ್ಕೆ ಟ್ರಕ್‌ನಲ್ಲಿ ಪ್ರಯಾಣ ಮಾಡಿದ ರಾಹುಲ್ ಜನಸಾಮಾನ್ಯರಿಗೆ ಹತ್ತಿರವಾಗಿದ್ದೇನೆ ಎಂಬ ಸಂದೇಶವನ್ನು ಸಾರಿದ್ದರು.


ಇದೀಗ ಹೊಸ ಅವತಾರದೊಂದಿಗೆ ರಾಹುಲ್ ಗಾಂಧಿ, ದೇಶದ ಜನರ ಹುಬ್ಬೇರುವಂತೆ ಮಾಡಿದ್ದಾರೆ. ಹರ್ಯಾಣದ ಸೋನಿಪಥ್‌ನಲ್ಲಿ ಕಾಂಗ್ರೆಸ್ ನಾಯಕ ಹೊಲಕ್ಕೆ ಇಳಿದು ರೈತರೊಂದಿಗೆ ಭತ್ತದ ನಾಟಿ ಮಾಡುವ ಕಾಯಕದಲ್ಲಿ ತೊಡಗಿದರು.


ಆ ಬಳಿಕ ರೈತರ ಜೊತೆಗೆ ಕೆಲ ಕಾಲ ಚರ್ಚೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಕಾಯಕ ಮತ್ತು ಅವರ ಕಷ್ಟ-ಸುಖದ ಬಗ್ಗೆ ಮಾತುಕತೆ ನಡೆಸಿದರು.


ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದಾಗ ದಾರಿ ಮಧ್ಯೆ ಭತ್ತದ ಗದ್ದೆಯೊಂದರ ಬಳಿ ಕಾರು ನಿಲ್ಲಿಸಿ ರೈತರ ಜೊತೆಗೆ ಕೃಷಿ ಕಾಯಕದಲ್ಲಿ ನಿರತರಾದರು. ಕೆಲ ಹೊತ್ತು ಟ್ರ್ಯಾಕರ್ ಮೂಲಕ ಉಳುಮೆಮಾಡಿ ರೈತರೊಂದಿಗೆ ಭತ್ತದ ನಾಟಿ ಮಾಡಿದರು.


ಅವರ ಈ ಕೃತ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕೆಲ ದಿನಗಳ ಹಿಂದಷ್ಟೇ ಅವರು ದೆಹಲಿಯ ಕರೋಲ್ ಭಾಗ್‌ ಪ್ರದೇಶದಲ್ಲಿ ಬೈಕ್ ವರ್ಕ್‌ಶಾಪ್‌ನಲ್ಲಿ ಮೆಕಾನಿಕ್ ಗಳ ಜೊತೆಗೆ ಮಾತುಕತೆ ನಡೆಸಿದ್ದರು. ಮುರಿದ ಮೋಟಾರ್ ಸೈಕಲ್‌ಗಳ ರಿಪೇರಿಗೂ ಕೈ ಹಾಕಿದ್ದರು.