-->
1000938341
ಮದುವೆ ಛತ್ರಕ್ಕೆ ಏಕಾಏಕಿ ನುಗ್ಗಿದ ಆನೆಗಳ ಹಿಂಡು: ವಧು - ವರ ಬೈಕ್ ನಲ್ಲಿ ಪರಾರಿ

ಮದುವೆ ಛತ್ರಕ್ಕೆ ಏಕಾಏಕಿ ನುಗ್ಗಿದ ಆನೆಗಳ ಹಿಂಡು: ವಧು - ವರ ಬೈಕ್ ನಲ್ಲಿ ಪರಾರಿ


ಕೊಲ್ಕತ್ತಾ: ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಆನೆಗಳ ಹಿಂಡೊಂದು ಆಗಮಿಸಿದ ಪರಿಣಾಮ ಛತ್ರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆನೆಗಳನ್ನು ಕಂಡೊಡನೆ ನವವಧು ಹಾಗೂ ವರ ಭಯಭೀತರಾಗಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಈ ಘಟನೆ ಪಶ್ಚಿಮ ಬಂಗಳಾದ ಜಾರ್ಗ್ರಾಮ್​ ಜಿಲ್ಲೆಯಲ್ಲಿ ನಡೆದಿದೆ.

ತನ್ಮೋಯ್​ ಸಿಂಘ ಹಾಗೂ ಮಂಪಿ ಎಂಬವರ ವಿವಾಹ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. 

ಮದುವೆ ಮನೆಯಲ್ಲಿ ಮಾಡಿಸಿದ್ದ ಅಡುಗೆಯ ವಾಸನೆಯನ್ನು ಆಘ್ರಾಣಿಸಿ ಆನೆಗಳ ಹಿಂಡು ಏಕಾಏಕಿ ಅಡುಗೆ ಕೋಣೆಗೆ ನುಗ್ಗಿವೆ. ಇದನ್ನು ಗಮನಿಸಿ ಮದುವೆಗೆ ಬಂದವರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದಾರೆ.‌ ವಧು ಹಾಗೂ ವರ ಸಂಬಂಧಿಕರೊಬ್ಬರ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವರ ತನ್ಮೋಯ್​ ಸಿಂಘ ಈ ಬಗ್ಗೆ ಪ್ರತಿಕ್ರಿಯಿಸಿ, ಮದುವೆಗೆಂದು ಬಂದ ಅತಿಥಿಗಳ ಊಟಕ್ಕಾಗಿ ಮಟನ್​ ಹಾಗೂ ತರಕಾರಿಗಳನ್ನು ಬಳಸಿ ಅಡುಗೆ ಮಾಡಿಸಲಾಗಿತ್ತು. ಇದರ ಸುವಾಸನೆಯಿಂದ ಆಕರ್ಷಿತವಾಗಿ ಆನೆಗಳ ಗುಂಪು ಆಗಮಿಸಿದ್ದು, ನೇರ ಅಡುಗೆ ಮಾಡಿದ ಸ್ಥಳಕ್ಕೆ ನುಗ್ಗಿದ್ದಾವೆ. ಇದರಿಂದ ಭಯಗೊಂಡ ಜನ ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದಾರೆ.

ಈ ಪ್ರದೇಶದಲ್ಲಿ ಆನೆಗಳ ಹಾವಳಿ ಜಾಸ್ತಿಯಿದ್ದು, ಅರಣ್ಯ ಇಲಾಖೆಗೆ ಹಲವು ಬಾರಿ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆನೆಗಳ ದಾಳಿಯಿಂದಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ವರ ತನ್ಮೋಯ್​ ಸಿಂಘ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article