-->
1000938341
ಪೆಟ್ರೋಲ್ ಲೀಟರ್‌ಗೆ 15 ರೂ - ಅಚ್ಚರಿ ಹೇಳಿಕೆ ನೀಡಿದ ಗಡ್ಕರಿ

ಪೆಟ್ರೋಲ್ ಲೀಟರ್‌ಗೆ 15 ರೂ - ಅಚ್ಚರಿ ಹೇಳಿಕೆ ನೀಡಿದ ಗಡ್ಕರಿ


ಹೊಸದಿಲ್ಲಿ: ಒಂದು ಲೀಟರ್ ಪೆಟ್ರೋಲ್ ಕೇವಲ 15 ರೂ.ಗೆ ಸಿಗುವಂತೆ ಮಾಡುವ ವಿನೂತನ ಆಲೋಚನೆಯನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮುಂದಿಟ್ಟಿದ್ದಾರೆ. 

ಎಥೆನಾಲ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆ ಮೂಲಕ ಇದು ಸಾಧ್ಯವಾಗಲಿದೆ ಎಂದು ಅವರು ಹೇಳಿ ದ್ದಾರೆ. ರಾಜಸ್ಥಾನದ ಪ್ರತಾಪಗಢದಲ್ಲಿ ನಡೆದ ಕ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ''ಶೇ.60 ರಷ್ಟು ಎಥೆನಾಲ್ ಚಾಲಿತ ವಾಹನ ಹಾಗೂ ಶೇಕಡಾ 40 ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಭಾರತ ಸಾಗುತ್ತಿದೆ. ಇದು ಸಂಪೂರ್ಣ ಸಾಕಾರ ವಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 15 ರೂ.ಗೆ ಇಳಿಯಲಿದೆ,'' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿತಿನ್ ತೈಲ ಥಿಯರಿ

''ಎಥೆನಾಲ್ ಉತ್ಪಾದನೆ ಹೆಚ್ಚಳ, ಇಂಧನಕ್ಕೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ವಾಹನಗಳ (ಇ.ಎ) ಬಳಕೆಗೆ ಉತ್ತೇಜನ ನೀಡಿದರೆ ದೇಶದಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 15 ರೂ.ಗಳಿಗೆ ಇಳಿಯುತ್ತದೆ,'' ಎಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ಪ್ರತಾಪಗಢದಲ್ಲಿ ಮಾತ ನಾಡಿದ ಸಚಿವ ನಿತಿನ್ ಗಡ್ಕರಿ, ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 15 ರೂ.ಗೆ ಇಳಿ ಸುವ ವಿನೂತನ ಪ್ರಸ್ತಾವನೆಯನ್ನು ಮಂಡಿಸಿ ದರು. ''ದೇಶದ ಅನ್ನದಾತರನ್ನು ಇಂಧನ ಉತ್ಪಾದಕರಾಗಿ ಬದಲಿಸಬೇಕು. ಶೇ.60 ರಷ್ಟು ಎಥೆನಾಲ್‌ ಮಿಶ್ರಿತ ತೈಲ ಬಳಕೆ ವಾಹನ, ಶೇ.40ರಷ್ಟು ವಿದ್ಯುತ್ ಚಾಲಿನ ವಾಹನಗಳ ಬಳಕೆ ಉತ್ತೇಜಿಸಿದರೆ ಪೆಟ್ರೋಲ್ ಬೆಲೆ ಕೆಳಗಿಳಿಯುತ್ತದೆ,'' ಎಂದು ಹೇಳಿದರು.

“ಭವಿಷ್ಯದಲ್ಲಿ ರೈತರು ಎಥೆನಾಲ್ ತೈಲದ ವಾಹನಗಳು ಬಳಸಿದರೆ, ಶೇ.40ರಷ್ಟು ವಿದ್ಯುತ್‌ ಚಾಲಿತ ವಾಹನಗಳು ರಸ್ತೆಗಿಳಿದರೆ ಪೆಟ್ರೋಲ್ ಬೆಲೆ ಲೀಟರ್‌ಗೆ ಕೇವಲ 15 ರೂ.ಗೆ ಕುಸಿಯಲಿದೆ. ಇದರಿಂದ ಸಾಮಾನ್ಯ ಜನರಿಗೆ ಉಪಯೋಗ ವಾಗಲಿದೆ. ಎಥೆನಾಲ್ ಹಾಗೂ ವಿದ್ಯುತ್‌ ಚಾಲಿತ ವಾಹನಗಳಿಂದ ವಾಯು ಮಾಲಿನ್ಯ ನಿಯಂತ್ರಣ ಮಾಡಬಹುದು. ಜತೆಗೆ ತೈಲ ಆಮದಿಗೆ ನೀಡುವ ಸುಮಾರು 16 ಲಕ್ಷ ಕೋಟಿ ರೂ. ಹಣವನ್ನು ರೈತರ ಕಲ್ಯಾಣಕ್ಕೆ ಮೀಸಲಿಡಬಹುದು,'' ಎಂದು ಹೇಳಿದರು. ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜಸ್ಥಾನದಲ್ಲಿ 5,600 ಕೋಟಿ ರೂ. ಮೊತ್ತದ 11 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಗಡ್ಕರಿ ಅವರು ಚಾಲನೆ ನೀಡಿದರು.

Ads on article

Advertise in articles 1

advertising articles 2

Advertise under the article