-->
1000938341
ಹಣ ದೋಚಲು ಡಬ್ಬಲ್ ಮರ್ಡರ್: ದೊರಕಿದ್ದು ಮಾತ್ರ 488ರೂ.

ಹಣ ದೋಚಲು ಡಬ್ಬಲ್ ಮರ್ಡರ್: ದೊರಕಿದ್ದು ಮಾತ್ರ 488ರೂ.


ಮೈಸೂರು: ಹಣ ದೋಚಲು ಮರದ ಮಿಲ್ ಒಂದರ ಕಾವಲುಗಾರ ಹಾಗೂ ಮಾನಸಿಕ ಅಸ್ವಸ್ಥನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಎಸ್.ಎಸ್. ಸಾಮಿಲ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ವೆಂಕಟೇಶ್ (65), ಷಣ್ಮುಗಂ(60), ಎಂದುಮೃತಪಟ್ಟ ದುರ್ದೈವಿಗಳು. ಅಭಿಷೇಕ್(23) ಬಂಧಿತ ಆರೋಪಿ. ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಜೂನ್ 22ರಂದು ಹಣದ ದೋಚಲು ಮೂವರು ಆರೋಪಿಗಳು ಹುಣಸೂರಿನ ವಿಶ್ವೇಶ್ವರಯ್ಯ ಸರ್ಕಲ್‌ನಲ್ಲಿರುವ ಎಸ್.ಎಸ್. ಸಾಮಿಲ್‌ನ ಕಾವಲುಗಾರರಾದ ವೆಂಕಟೇಶ್ ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂನನ್ನು ಹತ್ಯೆ ಮಾಡಿದ್ದಾರೆ. ಹತ್ಯೆಗೈದು ಪರಿಶೀಲನೆ ನಡೆಸಿದ ಬಳಿಕ ಮೃತ ಜೇಬಿನಲ್ಲಿದ್ದ 488 ರೂ. ಇದ್ದು, ಅದಷ್ಟನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ 36 ಘಂಟೆಗಳ ಒಳಗಾಗಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಭಿಷೇಕ್ ಈ ಹಿಂದೆ ಹುಣಸೂರು ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article