ಉಳ್ಳಾಲ: ಇಲ್ಲಿನ ಕುಂಪಲದ ಆಶ್ರಯ ಕಾಲನಿಯ ತನ್ನ ನಿವಾಸದಲ್ಲಿ ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೂಪದರ್ಶಿ ಪ್ರೇಕ್ಷಾ ಎಂಬ ಯುವತಿಯ ಸಾವಿಗೆ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕುತ್ತಾರುವಿನ ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಯತಿರಾಜ್ ತನ್ನ ನಿವಾಸದ ಹಿಂಬದಿಯಿರುವ ಚಿಕ್ಕಮ್ಮನ ಮನೆಯ ಮುಂಭಾಗದ ಸಿಟ್ ಔಟ್ ನಲ್ಲಿರುವ ಕಬ್ಬಿಣದ ಹುಕ್ಸ್ ಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ. ಮೇ 10ರಂದು ರಾತ್ರಿ 11ರ ವೇಳೆಗೆ ಈ ಘಟನೆ ನಡೆದಿರಬಹುದು ಎನ್ನಲಾಗಿದೆ. ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ.
2021ರ ಮಾರ್ಚ್ 10 ರಂದು ಕುಂಪಲದ ಆಶ್ರಯ ಕಾಲನಿ ನಿವಾಸಿ ರೂಪದರ್ಶಿ ಪ್ರೇಕ್ಷಾ ತನ್ನ ಮನೆಯ ಕೋಣೆಯೊಳಗೆ ಸಿಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಯುವತಿಯ ಪೋಷಕರ ದೂರಿನಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ ಉಳ್ಳಾಲ ಪೊಲೀಸರು ಯತಿರಾಜನ್ನ ಬಂಧಿಸಿದ್ದರು. ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಯತಿರಾಜ್ ನ್ಯಾಯಾಲಯದಲ್ಲಿ ಈಗಲೂ ಪ್ರಕರಣವನ್ನು ಎದುರಿಸುತ್ತಿದ್ದ.