ಸುಲಿಗೆಗೆತ್ನಿಸಿದ ಶತಾಯುಷಿ ಅಜ್ಜಿ ಪೊಲೀಸ್ ಅತಿಥಿಯಾದಳು

ಕಾನ್ಸುರ: ಭೂವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಶತಾಯುಷಿ ಅಜ್ಜಿಯೊಬ್ಬಳು ಜಾಗದ ಮಾಲಕರಿಗೆ 10 ಲಕ್ಷ ರೂ. ಬೇಡಿಕೆ ಇಟ್ಟು ಸುಲಿಗೆ ಮಾಡಲೆತ್ನಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಚಂದ್ರಕಾಳಿ ದೇವಿ ನೂರರ ವೃದ್ಧೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಕೆಯೀಗ ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ದೂರುದಾರೆ ಮಹಿಳೆ ಮಾಧುರಿ ಎಂಬವರ ಹೆಸರಿನಲ್ಲಿ ಕಾಲ್ಪುರದಲ್ಲಿ ಜಾಗ ಒಂದನ್ನು ಖರೀದಿಸಲಾಗಿತ್ತು. ಆದರೆ ಚಂದ್ರಕಾಳಿ ಹಾಗೂ ಆಕೆಯ ಮಕ್ಕಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೆ ಜಾಗವು ತಮ್ಮ ಹೆಸರಿನಲ್ಲಿರುವ ಕಾರಣ ಇಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ನಡೆಸದಂತೆ ಮಾಲಕರಿಗೆ ಹೇಳಿದ್ದಾರೆ.

ಒಂದು ವೇಳೆ ಈ ಜಾಗದಲ್ಲಿ ಕಟ್ಟಡ ನಿರ್ಮಿಸಬೇಕಾದರೆ  ತಮಗೆ 10 ಲಕ್ಷ ರೂ. ನೀಡಬೇಕು. ಕೊಡದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.

ಮೇ 6ರಂದು ಜಾಗಕ್ಕೆ ಸಂಬಂಧಿಸಿದಂತೆ ಕೆಲಸ ಆರಂಭಿಸಲಾಗಿತ್ತು. ಕೆಲಸ ಮಾಡಲು ಮುಂದಾದಾಗ ಮಹಿಳೆ ಹಾಗೂ ಆಕೆಯ ಪತಿ ಮೇಲೆ ಚಂದ್ರಕಾಳಿ 10- 12 ಜನರನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇವರು ಮಿರ್ಜಾಪುರ ನಯಿ ಬಸ್ತಿಯಲ್ಲಿ ವಾಸಿಸುತ್ತಿದ್ದು ಸುತ್ತಮುತ್ತಲಿನಲ್ಲಿ ಯಾರಾದರೂ ಜಾಗ ಖರೀದಿಸಿದರೆ ಅವರಿಗೆ 5- 10 ಲಕ್ಷ ರೂ. ನೀಡಬೇಕು ಇಲ್ಲವಾದಲ್ಲಿ ಅವರನ್ನು ಬೆದರಿಸಿ ಹಲ್ಲೆ ಮಾಡುತ್ತಾರೆ ಎಂದು ದೂರಿದ್ದಾರೆ.

ದೂರಿನ ಹಿನ್ನಲೆಯಲ್ಲಿ ಚಂದ್ರಕಾಳಿ ದೇವಿ ಹಾಗೂ ಕುಟುಂಬಸ್ಥರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ವಿಚಾರಣೆಯಲ್ಲಿ ಭಾಗಿಯಾದರೂ ಮತ್ತು ತನಿಖೆಗೆ ಸಹಕರಿಸುವುದಾಗಿ ಹೇಳಿಕೆ ನೀಡುರುವುದಾಗಿ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu